ಆಲೂರು : ಜನರು ತಮ್ಮ ದೈನಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಸರಿಯಾದ ರೀತಿಯಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒತ್ತಡ ರಹಿತವಾದ ಜೀವನವನ್ನು ರೂಪಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಮಿನಿ ವಿದಾನಸೌಧ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಆಲೂರು ಮತ್ತು ವಿವಿಧ ಇಲಾಖೆಗಳು ಮತ್ತು ವಿವಿಧ ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ” ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯವನ್ನು ಗೆಲ್ಲೋಣ” ಶೀರ್ಷಿಕೆಯಡಿ ವಾಕಥಾನ್-2025 ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿದ ಅವರು

ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವು/ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ ಜನರು ದೈಹಿಕವಾಗಿ ಸದೃಢರಾಗಬೇಕು,ಎಣ್ಣೆ ರಹಿತ ಆಹಾರವನ್ನ ಸೇವಿಸಬೇಕು, ಮದ್ಯಪಾನ ತ್ಯಜಿಸಬೇಕು, ಮಾದಕ ವಸ್ತುಗಳಾದ ಡ್ರಗ್ಸ್ ಸೇವನೆಯನ್ನು ತ್ಯಜಿಸಬೇಕು ಎಲ್ಲವನ್ನು ನಾವು ಮೈಗೂಡಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಮಾಧ್ಯಮ ಮಿತ್ರರಲ್ಲಿ ಒಂದು ಮನವಿ ಪ್ರತಿ ಹಳ್ಳಿಗೂ, ಪ್ರತಿಮನೆಗೂ, ಈ ಸಂದೇಶ ತಲುಪುವಂತೆ ಮಾಡಬೇಕು ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *