ಆಲೂರು : ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಇಲ್ಲವೇ ಇಲ್ಲ, ರೈತರು ಆತಂಕ ಪಡಬೇಡಿ, ಎಲ್ಲರಿಗೂ ಸಮರ್ಪಕ ವಿತರಣೆ ನಡೆಯುತ್ತಿದೆ ಎಂದು ಆಲೂರು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ರೈತರಿಗೆ ತಿಳಿಸಿದ್ದಾರೆ.

ಆಲೂರು ತಾಲ್ಲೂಕಿನ ಎಲ್ಲಾ ಎಜೇನ್ಸಿ ಮಾರಾಟಗಾರರ ಅಂಗಡಿಗೆ ಇಂದು ಭೇಟಿ ನೀಡಿ ಕೃಷಿ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಗೊಬ್ಬರ ವಿತರಣೆಯನ್ನು ಪರಿಶೀಲಿಸಿ ಮಾತಾನಾಡಿದವರು ಈಗಾಗಲೇ ಆಲೂರು ತಾಲೂಕಿಗೆ 78 ಟನ್ ಯೂರಿಯಾ ಗೊಬ್ಬರ ಬಂದಿದೆ.

ತಾಲೂಕಿಗೆ 2800 ಮೆಟ್ರಿಕ್ ಟನ್ ಬೇಡಿಕೆಯಿದ್ದು ಅದರಲ್ಲಿ 2600 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇನ್ನೂ ಮತ್ತಷ್ಟು ಗೊಬ್ಬರ ಬರಲಿದ್ದು ರೈತರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಲ್ಲಾ ಕಡೆ ಗೊಬ್ಬರ ಲಭ್ಯವಿದ್ದು ರೈತರು ತಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸಿ ಹಾಗೂ ದ್ರವ ರೂಪದ ನ್ಯಾನೋ ಯೂರಿಯಾ ಬಳಕೆ ಮಾಡುವುದು ಸೂಕ್ತ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಆಲೂರು ಪೊಲೀಸ್ ಠಾಣೆಯ ಆಲೂರು ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಸಿಬ್ಬಂದಿ ಸಂಗಮ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *