ಸಕಲೇಶಪುರ : ಕರ್ನಾಟಕ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ ಈ ವರೆಗೆ ದೂರುದಾರ ಸೂಚಿಸಿದ‌ ಸ್ಥಳದಲ್ಲಿ ಸ್ಥಳ ಪರಿಶೀಲನೆ ನಡೆಸಿರುವ ಎಸ್ಐಟಿ ಯಾವುದೇ ಮಾಹಿತಿ ನೀಡದೆ ಮೌನವಾಗಿದ್ದು ಕೆಲ ದಿನನಿತ್ಯ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಿತ್ತರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಬಗ್ಗೆ ಹಾಗೂ ಪರಮಪೂಜ್ಯರ ಬಗ್ಗೆ ಅವಮಾನ ಮಾಡುವಂತೆ ಇವತ್ತು ಅಲ್ಲಿರುವ ಕೆಲವರು ನಡೆದುಕೊಳ್ಳುತ್ತಿರುವವರ ವಿರುದ್ಧವು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ ಮಾತನಾಡಿ ಎಸ್ಐಟಿ ತಕ್ಷಣವೇ ತನಿಖೆ ನಡೆಸಿ ತನಿಖೆ ಮುಗಿಸಬೇಕು. ಸತ್ಯಾಸತ್ಯತೆ ಇಡೀ ಸಮಾಜಕ್ಕೆ ತಿಳಿಯಬೇಕು. ಅನಾಮಿಕ ದೂರುದಾರೊಡನೆ ಕೆಲವು ಮತೀಯವಾದಿಯ ಎಡಪಂಥೀಯರು ಶಾಮೀಲಾಗಿರುವ ಶಂಕೆ ಇದೆ. ಹಿಂದೂ ವಿರೋಧಿ ಈ ಸಂಚನ್ನು ನಾವು ಖಂಡಿಸುತ್ತೇವೆ ಅಗತ್ಯ ಬಿದ್ದರೆ ಧರ್ಮಸ್ಥಳ ಚಲೋ ಹೆಸರಿನಲ್ಲಿ ಇಡೀ ರಾಜ್ಯದ ಹಿಂದೂ ಕಾರ್ಯಕರ್ತರು ನಮ್ಮ ಪುಣ್ಯಕ್ಷೇತ್ರ ಮೇಲಾಗುತ್ತಿರುವ ದಬ್ಬಾಳಿಕೆ ವಿರುದ್ಧ ಗಟ್ಟಿಯಾಗಿ ನಿಂತು ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಮಂಜುನಾಥ್ ಕಬ್ಬಿನಗದ್ದೆ. ಪ್ರದೀಪ್ ಪೂಜಾರಿ. ಶೇಖರ್. ದುಶ್ಯಾಂತ್ ಗೌಡ. ಶಿವು ಜಿಪ್ಪಿ. ಶ್ರೀಜಿತ್ ಗೌಡ. ಸೇರಿದಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *