ಸಕಲೇಶಪುರ : ಶುಕ್ರವಾರ ಸುಭಾಷ್ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದ ಸಂಯೋಜಕದೊಂದಿಗೆ ಮಾತನಾಡಿದ ಅವರು ಅವ್ಯವಸ್ಥೆಯ ತಾಣವಾಗಿರುವ ಹಾಗೂ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯೇ ಸರಿ ಇಲ್ಲದಿದ್ದರೂ ಮಕ್ಕಳು ಯಾವ ರೀತಿ ಶೌಚಾಲಯಕ್ಕೆ ಹೋಗಬೇಕು ಅವ್ಯವಸ್ಥೆಯ ಆಗರವಾಗಿರುವ ಈ ಸುಭಾಷ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಏಕೆ ಆಯೋಜನೆ ಮಾಡಿದಿರಿ ಎಂದು ತರಾಟೆಗೆ ತೆಗೆದುಕೊಂಡರು

ನಂತರ ಅವರನ್ನು ಶೌಚಾಲಯ ದತ್ತ ಕರೆದೊಯ್ದು ಶೌಚಾಲಯದ ದುಸ್ಥಿತಿಯ ನರಕ ದರ್ಶನ ಮಾಡಿಸಿದರು.

ಈ ಸಂಧರ್ಭದಲ್ಲಿ ಹೆತ್ತೂರು ಹೋಬಳಿ ಅದ್ಯಕ್ಷರಾದ ದಿಂಡಿಮ,ಅಗ್ರಹಾರ ಘಟಕದ ಅದ್ಯಕ್ಷ ಸುದಿ, ಉಪಾದ್ಯಕ್ಷರಾದ ಭರತ್,ಸಾಗರ್, ಕುಮಾರ್, ತಾಲೂಕು ಸಂಚಾಲಕರಾದ ಎ. ಸಿ. ಪ್ರಸಾದ್, ಪುರುಷೋತ್ತಮ್, ಇನ್ನೂ‌ ಮುಂತಾದ ಕಾರ್ಯಕರ್ತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *