ಸಕಲೇಶಪುರ : ಸ್ವಚ್ಛ ವಿಧಾನಸಭೆ ಅಭಿಯಾನ ಎಂಬ ಶೀರ್ಷಿಕೆಯೊಂದಿಗೆ ಸ್ವಾತಂತ್ರ್ಯ ,ಸಮಾನತೆ, ಪ್ರಜಾಪ್ರಭುತ್ವ ಉಳುವಿಗಾಗಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಜನಪರ ಆಡಳಿತಕ್ಕಾಗಿ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಕಾರ್ಯಕರ್ತ ನಾಗರಾಜ,ಶಿ. ಕಲಕುಟಗರ ಹೇಳಿದರು .

ಗುರುವಾರ ಸಕಲೇಶಪುರಕ್ಕೆ ಪಾದಯಾತ್ರೆಯಲ್ಲಿ ಬಂದ ನಾಗರಾಜ.ಶಿ.ಕಲಕುಟಗರ ಅವರು ಮಾಧ್ಯಮದೊಂದಿಗೆ ಮಾತನಾಡಿ ಸ್ವಚ್ಛ ವಿಧಾನಸಭೆ ಅಭಿಯಾನ ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯ ಸಮಾನತೆ ಪ್ರಜಾಪ್ರಭುತ್ವ ಉಳುವಿಗಾಗಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಜನಪರ ಆಡಳಿತಕ್ಕಾಗಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ಈ ಪಾದಯಾತ್ರೆಯನ್ನು ನಾನು ಕೈಗೊಂಡಿದ್ದು ಇದೀಗ ಸುಮಾರು 10 ಜಿಲ್ಲೆಗಳ 150 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮುಗಿಸಿ ಇದೀಗ ಸಕಲೇಶಪುರಕ್ಕೆ ಆಗಮಿಸುತ್ತಿದ್ದೇನೆ ವಿಧಾನಸಭೆಗೆ ಆಯ್ಕೆಯಾಗುವ ನಮ್ಮ ಜನಪ್ರತಿನಿಧಿಗಳು ಭ್ರಷ್ಟರಲ್ಲದ ಕೋಮುವಾದಿಯಲ್ಲದ ಪ್ರಬುದ್ಧ ಜನಪರ ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ ಆದರೆ ಈಗ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಜನಪ್ರತಿನಿಧಿಗಳನ್ನು ನಾವು ಕಾಣಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ 224 ಕ್ಷೇತ್ರಗಳಿಗೂ ಪಾದಯಾತ್ರೆ ಮಾಡುತ್ತಿದ್ದು ಸಕಲೇಶಪುರಕ್ಕೆ ಆಗಮಿಸುವ ವೇಳೆ ಡ್ರಗ್ಸ್ ಮುಕ್ತ ಭಾರತ ಆಂದೋಲನ ಕಾರ್ಯಕ್ರಮ ನಡೆಯುತ್ತಿರುವುದು ಅರಿವಿಗೆ ಬಂದ ಹಿನ್ನೆಲೆಯಲ್ಲಿ ಇದೊಂದು ಉತ್ತಮವಾದ ಕಾರ್ಯಕ್ರಮ ಎಂದು ಭಾವಿಸಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ನಾನು ಕೂಡ ಒಬ್ಬ ವಿದ್ಯಾವಂತನಾಗಿ ಎಂಎಸ್ಸಿ, ಎಂ ಟೆಕ್ ಪದವೀಧರನಾಗಿದ್ದು ಯಾವುದಾದರೊಂದು ಉದ್ಯೋಗಕ್ಕೆ ಸೇರಬಹುದಿತ್ತು ಆದರೆ ಸಮಾಜದ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಮ್ಮಂತ ಯುವಕರದ್ಧಾಗಿದ್ದು ಯುವಕರಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನಜಾಗೃತಿ ಪಾದಯಾತ್ರೆ ಇದಾಗಿದೆ ಎಂದರು.

ನಂತರ ಕಾರ್ಯಕ್ರಮದ ನಿಮಿತ್ತ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ನೀತಿ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ ಆರ್ ಪಾಟೀಲ್, ಗಾಂಧಿವಾದಿ ಪ್ರಸನ್ನ ಚರಕ, ಡ್ರಗ್ಸ್ ಮುಕ್ತ ಭಾರತ ಆಂದೋಲನ ಪ್ರಮುಖ ಅವಿನಾಶ್ ಕಾಕಡೆ, ಆಲಿಬಾಬ, ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನ ಪ್ರಮುಖರಾದ ಹೆಚ್.ಎಂ. ವಿಶ್ವನಾಥ್, ಜೈಮಾರುತಿ ದೇವರಾಜ್, ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷ ಸಾಗರ್ ಜಾನೆಕೆರೆ, ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಹಿರಿಯ ಪತ್ರಕರ್ತ ಮಲ್ನಾಡ್ ಮೆಹಬೂಬ್ ಅಕ್ಬರ್ ಜುನೈದ್, ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾದಯಾತ್ರೆ ಬಂದ ನಾಗರಾಜ.ಶಿ. ಕಲಕುಟಗರ ಅವರಿಗೆ ಬೀಳ್ಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *