ಸಕಲೇಶಪುರ :- ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಉದ್ಘಾಟನೆಯಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಗನ್ ಗೌಡರು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಕ.ರ.ವೇ ಸಂಘಟನೆ ಬೆಳೆಯಲು ಪ್ರತಿನಿತ್ಯ ಸತತ ಪ್ರಯತ್ನದಲ್ಲಿ ಕಾರ್ಯ ನಿರತರಾಗಿದ್ದಾರೆ.

ಈಗಾಗಲೇ ತಾಲೂಕಿನ ಕ.ರ.ವೇ ಬಹುತೇಕ ಎಲ್ಲಾ ಘಟಕಗಳು ಉದ್ಘಾಟನೆ ಆಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಇಂದು ನಗರ ಘಟಕದ ನೂತನ ಅಧ್ಯಕ್ಷರಾಗಿ ಪ್ರಜ್ವಲ್ ವಿ. ಆರ್ ಆಯ್ಕೆಯಾಗಿದ್ಧಾರೆ.ಹಾಗೂ ತಮ್ಮ ಜೊತೆ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಸಂಘಟನೆಗೆ ಸೇರಿಸಿರುವುದು ಸಂಘಟನೆಗೆ ಇನ್ನೊಷ್ಟು ಬಲ ಬಂದಂತಾಗಿದೆ.

ಅತ್ಯಂತ ಕ್ರಿಯಾಶೀಲರಾಗಿರುವ ಸಂಘಟನೆಯನ್ನು ಕಟ್ಟುವ ಉತ್ಸಾಹ ಹೊಂದಿರುವ ನಾಡು ನುಡಿ ಹೋರಾಟಕ್ಕೆ ಸದಾ ಮುಂದೆ ಇರುವ ಯುವಕ ಪ್ರಜ್ವಲ್ ನಗರ ಅಧ್ಯಕ್ಷರಾಗಿರುವುದು ತುಂಬಾ ಖುಷಿಯ ವಿಚಾರ ಎಂದು ತಾಲೂಕು ಕರವೇ ಅಧ್ಯಕ್ಷರಾದ ಗಗನ್ ಗೌಡ.. ಯುವ ಘಟಕ ಅಧ್ಯಕ್ಷರು ಆದ ಯಶಸ್.. ಕಸಬಾ ಹೋಬಳಿ ಅಧ್ಯಕ್ಷರು ಆದ ಸಿದ್ದಾಂತ್ ಪಟೇಲ..ವಸಂತ್ ಬೊಮ್ಮನಕೆರೆ.. ಸಂಗ್ರಾಮ.. ಹಾನುಬಾಳು ಅಧ್ಯಕ್ಷರು ಆದ ಗಗನ ಹುರುಡಿ ಹೇಳಿದರು.

ನನ್ನನ್ನು ಗುರುತಿಸಿ ಈ ಹುದ್ದೆಯನ್ನು ನೀಡಿರುವುದಕ್ಕೆ ನಾನು ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ನಾಡು ನುಡಿ ಜಲ ಭಾಷೆ ವಿಚಾರದಲ್ಲಿ ಯಾವುದೇ ಹೋರಾಟವಿದ್ದರೂ ನಾನು ಪ್ರಾಮಾಣಿಕವಾಗಿ ಪಾಲ್ಗೊಳ್ಳುತ್ತೇನೆ. ಹಾಗೂ ಮುಂದಿನ ದಿನಗಳಲ್ಲಿ ಸಕಲೇಶಪುರ ಜ್ವಲಂತ ಸಮಸ್ಯೆಗಳಿಗೆ ನಮ್ಮ ಸಂಘಟನೆ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಜ್ವಲ್ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *