ಅರಸೀಕೆರೆ : ನಾಡಿನಾದ್ಯಂತ ಶಕ್ತಿ ದೇವತೆ ಎಂದೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಮಾಡಾಳು ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಜಾತ್ರಾ ಮಹೋತ್ಸವ ಸೆ 4 ರಂದು ರಾತ್ರಿ 9:00 ಗಂಟಿಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ದೇವಿಗೆ ಮಹಾಮಂಗಳಾರತಿ ರದ್ದಾಬತ್ತಿಯಿಂದ ವಿಜ್ರಂಬಣೆಯಿಂದ ನಡೆಯಲಿದೆ

ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯ ಜಾತ್ರಾ ಮಹೋತ್ಸವವು ಶತಮಾನಗಳ ಹಿಂನಿಂದಲೂ ನಡೆದುಕೊಂಡು ಬರುತ್ತಿದೆ ಸೆ 6 ಕಂದು ಮುಂಜಾನೆ 4:30 ಗಂಟೆಗೆ ಕೋಡಿಮಠ ಶ್ರೀಗಳ ಸಮ್ಮುಖದಲ್ಲಿ ಗುಗ್ಗಳೊ ತ್ಸವದೇವಿಗೆ ಹರಕೆ ಹೊತ್ತು ಹರಕೆ ಒತ್ತ ನೂರಾರು ಮಹಿಳೆಯರು ತಲೆಯ ಮೇಲೆ ಗುಗ್ಗುಳ ಬಟ್ಟಲನ್ನು ಹೊತ್ತು ಶ್ರದ್ದಾ ಭಕ್ತಿಯಿಂದ ಕರ್ಪೂರ ಸೇವೆ ಸಲ್ಲಿಸಲಿದ್ದಾರೆ

ಕೋಡಿ ಮಠದ ಪರಮ ತಪಸ್ವಿ ಶಿವಲಿಂಗ ಮಹಾಸ್ವಾಮಿಗಳುದೇವಿಗೆ ಧಾರಣೆ ಮಾಡಲೆಂದ ಕೋಟಿ ಜಪ ಮಾಡಿ ಮುದ್ದೇಗೌಡರ ಕುಟುಂಬಕ್ಕೆ ಮೂಗುತಿಯನ್ನು ಆಶೀರ್ವದಿಸಿದ್ದಾರೆ ಆ ಮೂಗುತಿ ಮಹಿಮೆಯಿಂದಲೇ .ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಾ ಬಂದಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಶನಿವಾರ ಮಧ್ಯಾಹ್ನ ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ದೇವಿಯನ್ನು ಮಂಗಳ ಕರದೇವು ವಾದ್ಯದೊಂದಿಗೆ ಶ್ರೀ ಕೋಡಿಮಠದ ಶ್ರೀಗಳ ಮತ್ತು ಶ್ರೀ ಚನ್ನಬಸವೇಶ್ವರ ಸ್ವಾಮಿಸಮ್ಮುಖದಲ್ಲಿ ಗ್ರಾಮದಲ್ಲಿ ಉಸ್ತವ ನಡೆಯಲಿದೆ

ನಂತರ ಮೂರು ಗಂಟೆಗೆ ಊರ ಮುಂದಿನ ಕಲ್ಯಾಣಿಯಲ್ಲಿ ಗೌರಮ್ಮ ದೇವಿಯನ್ನು ವಿಸರ್ಜಿಸಲಾಗುವುದು ಇದರೊಂದಿಗೆ 12 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *