
ಹೆತ್ತೂರಿನ : ಕಣ್ಮಣಿ ಮರೆಯಲಾಗದ ಮಾಣಿಕ್ಯ ಊರಿನ ಯಾವುದೇ ಕಾರ್ಯಕ್ರಮ ಇದ್ದಾಗ ನಾನಿದ್ದೇನೆ ಎಂದು ಮುಂದೆ ನಿಂತು ಎಲ್ಲ ಯುವಕರಿಗೆ ಉತ್ಸಾಹ ತುಂಬಿ ಎಲ್ಲರನ್ನೂ ಒಗ್ಗೂಡಿಸಿ ಎಲ್ಲರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಾ ಬೆಳೆಗಾರರ ಸಂಘ ಹಾಗೂ ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಸಂಘಟನೆಗಳಿಗೆ ಪ್ರೋತ್ಸಾಹಿಸುತ್ತಾ ಕೆಲಸ ಮಾಡುತ್ತಿದ್ದ ಹಾಗೂ ನಾಡಿನಾದ್ಯಂತ ಹೆಸರುವಾಸಿಯಾದ ಶ್ರೀ ದೇವಿರಮ್ಮನವರ ಸುಗ್ಗಿಯನ್ನು ಬಹಳ ವರ್ಷಗಳಿಂದ ಯಶಸ್ವಿಯಾಗಿ ನಡೆಸಿ ಕೊಂಡು ಬರುತ್ತಿದ್ದ ಹೆತ್ತೂರು ಶ್ರೀ ಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷರಾದ ಹಾಗೂ ಬಹಳ ಚಿಕ್ಕ ವಯಸ್ಸಿನಲ್ಲಿ ಕಾಫಿ ಉದ್ಯಮದ ವೈವಾಟನ್ನು ನಡೆಸಿ ಅನೇಕರಿಗೆ ಆಸರೆ ಆಗಿ ತಮ್ಮ ಜೀವನವನ್ನು ರೋಪಿಸಿಕೊಂಡಿದ್ದ ಹೆತ್ತೂರಿನ ನಾಡ್ ಪಟೇಲರ ಮನೆ ಧರಣೇಂದ್ರ(55 ವರ್ಷ) ರವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದೈವಾಧೀನರಾಗಿದ್ದಾರೆ
ಇವರು ತಮ್ಮ ಮಾತೃಶ್ರೀ ಅವರು ಹಾಗೂ ಧರ್ಮಪತ್ನಿ ಸ್ಮಿತಾ ಇಬ್ಬರು ಮಕ್ಕಳಾದ ಲಾಲಿ ರಾಹುಲ್ ಹಾಗೂ ಸಹೋದರಿ ಹಾಗೂ ಸಹೋದರ ಚಂದ್ರಶೇಖರ್( ಬೆಳ್ಳಿ ) ಚಿಕ್ಕಪ್ಪರಾದ ಕೃಷ್ಣಮೂರ್ತಿ( ಗೋಪಣ್ಣ ) ಹಾಗು ಮಕ್ಕಳು ಅಣ್ಣ ತಮ್ಮಂದಿರು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಇಂದು ಅಗಲಿದ್ದಾರೆ
ಇವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ , ಇವರ ಅಗಲಿಕೆಯನ್ನು ಕರೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಇವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಕೇಳಿಕೊಳ್ಳುತ್ತಾ ಇವರ ಅಂತ್ಯಕ್ರಿಯೆ ಇಂದು ಸಂಜೆ ಹೆತ್ತೂರು ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸುವೆ.
