ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಕಿರಣ್ ಪ್ರೌಢಶಾಲೆ, ಲಕ್ಷ್ಮಿಪುರಂ ಬಡಾವಣೆ, ಹಾಸನ ಇವರ ವಿದ್ಯಾರ್ಥಿಗಳಿಗೆ ಉಚಿತವಾಗಿ “ಟ್ರಾಕ್ ಸೂಟ್ ವಿತರಣೆ” ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ “ಶಿಕ್ಷಕರಿಗೆ ಸನ್ಮಾನ” ಕಾರ್ಯಕ್ರಮವನ್ನು ಇಂದು ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು, ಕಿರಣ್ ವಿದ್ಯಾ ಟ್ರಸ್ಟ ನ ಸಂಸ್ಥಾಪಕರಾದ ಕೈಲಾಸ್ ಶಂಕರ್ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು,

ಸನ್ ರೈಸ್ ಕ್ಲಬ್ ನ ಅಧ್ಯಕ್ಷರಾದ ಹೆಚ್.ಡಿ.ವಜ್ರಕುಮಾರ್ ರವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ನುಡಿದರು.

ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ಇದ್ದ ರೋಟರಿ ಜಿಲ್ಲೆ 3182 ರ ವಲಯ 9 ರ ಅಸಿಸ್ಟೆಂಟ್, ಗವರ್ನರ್ ಆದ ಜೆ.ಎನ್ ಮಂಜುನಾಥ್ ರವರು ಕಾರ್ಯಕ್ರಮದ ಬಗ್ಗೆ ಹಿತನುಡಿಗಳನ್ನು ನುಡಿದರು.

ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಗಣ್ಯರಿಂದ “ಟ್ರ್ಯಾಕ್ ಸೂಟ್” ಅನ್ನು ವಿತರಣೆ ಮಾಡಲಾಯಿತು.

ಜೊತೆಗೆ ಶಾಲೆಯ ಸುಮಾರು 16 ಜನ ಶಿಕ್ಷಕ ಶಿಕ್ಷಕರಿಗೆ ಕ್ಲಬ್ ನ ವತಿಯಿಂದ ಸನ್ಮಾನವನ್ನು ಮಾಡಲಾಯಿತು.

ನಂತರ ಅಧ್ಯಕ್ಷರು ಅಧ್ಯಕ್ಷೀಯ ಭಾಷಣ ಮಾಡಿದರು. ನಂತರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಕಿರಣ್ ವಿದ್ಯಾಟ್ರಸ್ಟ್ ನ ಕಾರ್ಯದರ್ಶಿಯಾದ ಉಷಾದೇವಿ ರವರು ಕ್ಲಬ್ಬಿನ ಕಾರ್ಯದರ್ಶಿಯಾದ ಕೆ.ಎಸ್.ಯೋಗೇಶ್ ರವರು ಹಾಗೂ ಕ್ಲಬ್ಬಿನ ಸದಸ್ಯರುಗಳಾದ ರೋ!! ಎಂ.ಸಿ ರಾಜು, ರೋ!!ಸಿದ್ದನಂಜಪ್ಪ ರೋ!! ರಾಜೇಶ್ ರವರುಗಳು ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಇಂತಿ,ಟೀಮ್ ,ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *