
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಇಂಡಿಯನ್ ಇಂಗ್ಲಿಷ್ ಸ್ಕೂಲ್ ನಲ್ಲಿ 4 ವರ್ಷದಿಂದ ಶಾಲಾ ಮಕ್ಕಳುಗಳು. ಪ್ರಯಾಣಿಸುವ ವಾಹನದ ಫಿಟ್‌ನೆಸ್ ಪ್ರಮಾಣಪತ್ರ (ಎಫ್. ಸಿ) ಮತ್ತು ವಿಮೆ ಇಲ್ಲದ 20 ವರ್ಷದ ಹಳೆಯದಾದ ವಾಹನದದಲ್ಲಿ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದರೆ.
ಈ ಭಾಗದ ರಸ್ತೆಯು ಕೂಡ ಗುಂಡಿಗಳಿಂದ ಕುಡಿರುವ ಕಾರಣ ವಾಹನ ಈ ಶಾಲಾ ಸಂಚರಿಸುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರ ಆಗುತ್ತಾರೆ?. ಇಂತಹ ವಾಹನವನ್ನು ಶಾಲಾ ಮಕ್ಕಳನ್ನು ಕರೆದುಕೊಂಡು ಬಳಸುತ್ತಿರುವುದು ಎಷ್ಟು ಸರಿ? ಇದರ ಬಗ್ಗೆ ಶಾಲಾ ಆಡಳಿತ ಮಂಡಳಿಯವರ ವಿರುದ್ಧ ಸಕಲೇಶಪುರ ಸಂಚಾರಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಕರವೇ ಕಾರ್ಮಿಕ ಘಟಕದ ಅಧ್ಯಕ್ಷರಾದ ಸಂಗ್ರಾಮ ಹೊಡಚಳ್ಳಿ ಆಗ್ರಹಿಸಿದ್ದಾರೆ.
ಈ ಹಾನುಬಾಳು ಹೋಬಳಿಯ ಇಂಡಿಯನ್ ಇಂಗ್ಲಿಷ್ ಸ್ಕೂಲ್ ನಲ್ಲಿ ಶಾಲೆಯ ಒಂದು ಕಡೆ ಕೂಡ ಕನ್ನಡ ನಾಮಫಲ ಇಲ್ಲ ,ಹಾಗೂ ಶಾಲಾ ವಾಹನಗಳಲ್ಲಿ ಶಾಲೆಯ ಹೆಸರು ಕನ್ನಡ ಅಕ್ಷರವಿಲ್ಲ.ಶಾಲಾ ವಾಹನ ಇಂಗ್ಲಿಷ್ ಅಕ್ಷರದಲ್ಲಿ ರಾರಾಜಿಸುತ್ತಿದ್ದು,ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗೌರವ ಇಂಗ್ಲಿಷ್ ಮಾಯ ಶಾಲೆಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕನಿಷ್ಠ ಪಕ್ಷ ಶಾಲೆಯ ಹೆಸರನ್ನಾದರೂ ಕನ್ನಡದಲ್ಲಿ ನಮೂದಿಸುವಂತೆ ಮಾಡಿ ಕನ್ನಡ ಪ್ರೀತಿ ಬೆಳಸಬೇಕು. ಎಂದು ಕರವೇ ರೈತ ಘಟಕದ ಉಪಾಧ್ಯಕ್ಷರಾದ ಯೋಗೇಂದ್ರ ನೆಲಗಳ್ಳಿ ಹೇಳಿದ್ದಾರೆ.
ಕೂಡಲೆ ಒಳಗೆ ಎಫ್.ಸಿ ಇಲ್ಲದ ವಾಹನವನ್ನು ಬದಲಾವಣೆ ಮಾಡಬೇಕು ಅಥವಾ ಎಫ್.ಸಿ ಯನ್ನು ಮಾಡಿಸಿ ನಂತರ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಹೋಗಬೇಕು. ಹಾಗೂ ಶೇಕಡ 60ರಷ್ಟು ಶಾಲಾ ವಾಹನ ಹಾಗೂ ಶಾಲೆಯ ನಾಮಫಲಕದಲ್ಲಿ ಕನ್ನಡವನ್ನು ಅಳವಡಿಸಬೇಕು.ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಾಲ್ಲೂಕು ಕರವೇ ಅಧ್ಯಕ್ಷರಾದ ಗಗನ್ ಗೌಡ ಎಚ್ಚರಿಕೆ ನೀಡಿದ್ದಾರೆ.
