ಹಾಸನ : ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ವಿದ್ಯಾರ್ಥಿಗಳಿಂದ ಬ್ಯಾಡರಹಳ್ಳಿ ಗ್ರಾಮದಲ್ಲಿ “ಆಲೂಗಡ್ಡೆ ಕುಡಿ ಕಾಂಡ ತಂತ್ರಜ್ಞಾನ” ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸೃಷ್ಠಿ ಅವರು ನಿರ್ವಹಿಸಿದರು.ಈ ತಂತ್ರಜ್ಞಾನದಲ್ಲಿ ರೋಗ ರಹೀತ ಆಲೂಗಡ್ಡೆ ಸಸಿಗಳನ್ನೂ ಪ್ರಯೋಗಾಲಯದಲ್ಲಿ ಅಂಗಾಂಶ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಟಿಶೂಕಲ್ಟರ್ ನಿಂದ ಬಂದ ಗಿಡಗಳ ತುದಿಯನ್ನು ಕೋಕೋ ಪಿಟ್‌ಗಳಲ್ಲಿ ತಾಯಿ ಸಸ್ಯಗಳಾಗಿ ಬಳಸಲಾಗುತ್ತದೆ.

ಈ ರೀತಿಯಲ್ಲಿ ಆರು ವಾರಗಳಲ್ಲಿ, ಒಂದು ತಾಯಿಯ ಸಸ್ಯವನ್ನು 8 ಪಟ್ಟು ಸಸ್ಯಾಅಭಿವೃದ್ಧಿ ಮಾಡಬಹುದು. ಕುಡಿ ಕಾಂಡ ಸಸ್ಯಗಳನ್ನು ಕೋಕೋ ಪಿಟ್‌ಗಳಲ್ಲಿ ಬೇರು ಬಿಟ್ಟ ನಂತರ ಕೃಷಿ ಭೂಮಿಗೆ ನಾಟಿ ಮಾಡಲಾಗುವುದು.

ಈ ಕಾರ್ಯಕ್ರಮಕ್ಕೆ ಡಾ. ಸ್ಮಿತಾ ಜೈವಿಕ ತಂತ್ರಜ್ಞಾನ ವಿಭಾಗ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅವರು ಆಲೂಗಡ್ಡೆ ಕುಡಿ ಕಾಂಡದ ಬೇಸಾಯ ಕ್ರಮಗಳು ಹಾಗೂ ಅನುಕೂಲಗಳ ಬಗ್ಗೆ ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *