
ಸಕಲೇಶಪುರ : ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇದ್ದ ಅಧ್ಯಕ್ಷರ ಸ್ಥಾನಕ್ಕೆ ಮಲ್ಲೇಶ್ ಮದನಪುರ ಸ್ಪರ್ಧಿಸಿ ಜಯಶೀಲರಾಗಿದ್ದಾರೆ.
ಅಧ್ಯಕ್ಷರ ಚುನಾವಣೆಗೆ ಒಟ್ಟು 13 ಮತಗಳಿದ್ದು, 7 ಮತ ಮಲ್ಲೇಶ್ ಅವರು ಗಿಟ್ಟಿಸಿದರೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಆಕಾಶ್ ರವರು 5 ಮತಗಳನ್ನು ಪಡೆದು ಪರಭವಗೊಂಡಿರುತ್ತಾರೆ.
ಉಳಿದ 1 ಮತ ಗೈರು ಆಗಿರುತ್ತಾರೆ. ಚುನಾವಣೆಯ ಅಧಿಕಾರಿಗಳಾಗಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಗಂಗಾಧರ್ ಯಶಸ್ವಿಯಾಗಿ ಚುನಾವಣೆ ನೆರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಎಸ್ ಟಿ ಘಟಕದ ತಾಲೂಕು ಅಧ್ಯಕ್ಷರಾದ ಕಲ್ಗಣೆ ಪ್ರಶಾಂತ್ ಕೆ ಎಸ್, ಕಾಂಗ್ರೆಸ್ ಮುಖಂಡರಾದ ಬೈಕೆರೆ ದೇವರಾಜ್, ಗಿರೀಶ್ ಕಲ್ಗಣೆ, ಶಾಂತರಾಜ್ ಹೆನ್ನಲ್ಲಿ, ಅನಿಲ್ ಬಿಳಸಾರೆ ಮಂಜು ದೊಡ್ಡಮನೆ, ಗಣೇಶ್ ಗೌಡಹಳ್ಳಿ ,ಲಕ್ಷ್ಮಣ್ ಹುಲೆಮನೆ, ಮಂಜು ಹೆನ್ನಲಿ, ಸೇರಿದಂತೆ ಇತತೆರೆ ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.




