
ಸಕಲೇಶಪುರ : ಬಾಂಗ್ಲಾ ನುಸುಳು ಕೋರರು ಸಕಲೇಶಪುರ ನಗರದಲ್ಲಿ ಅಸ್ಸಾಮಿನಿಂದ ಬಂದ ಮುಸಲ್ಮಾನರು ಎಂದು ನಗರದಲ್ಲಿ ಕೆಲವು ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡಿರುತ್ತಾರೆ ಹಾಗೂ ಸ್ಥಳೀಯವಾದ ಎಲ್ಲಾ ಕೂಲಿ ಕೆಲಸಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ, ಆದರೆ ಸತ್ಯಾಂಶವೆಂದರೆ ನಗರದಲ್ಲಿ ರಾತ್ರಿಯ ಸಮಯ ಇವರುಗಳ ಓಡಾಟ ಹೆಚ್ಚುತ್ತಾ ಬಂದಿದೆ, ಗುಂಪುಗಾರಿಕೆ ,ಹೊಡೆದಾಟ ಹಾಗೂ ಅನಾವಶ್ಯಕ ಕೂಗಾಟಗಳಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ನೆಮ್ಮದಿಯಿಂದ ಶಾಂತಿಯಿಂದ ಇದ್ದಂತಹ ನಗರದ ಜನ ಇವರ ವರ್ತನೆಯಿಂದ ಭಯ ಬೀತರಾಗಿದ್ದಾರೆ,. ಸಕಲೇಶಪುರದ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕಳ್ಳತನ ಇತ್ಯಾದಿ ಪ್ರಕರಣಗಳಲ್ಲಿ ಇವರ ಕೈಚಳಕ ಕಂಡುಬಂದಿದ್ದು , ಇಂಥ ಗಂಭೀರ ವಿಷಯಗಳಿಂದ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದೆ.
ಈ ಸಮಸ್ಯೆಯನ್ನು ತಾಲೂಕು ಆಡಳಿತ ಮತ್ತು ಅಧಿಕಾರಿ ವರ್ಗ ಗಂಭೀರವಾಗಿ ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಇದಕ್ಕೆ ಕ್ರಮವನ್ನು ಜರುಗಿಸಿ” ಸಕಲೇಶಪುರದ ಜನತೆಯ ನೆಮ್ಮದಿಯನ್ನು ಹಿಂತಿರುಗಿಸಬೇಕೆಂದು ತಿಳಿಸಿದ್ದಾರೆ. ಇವರುಗಳ ದಾಖಲಾತಿಗಳನ್ನು ಪರಿಶೀಲಿಸಿ ದಾಖಲಾತಿ ಇಲ್ಲದವರನ್ನು ಹಾಗೂ ದಾಖಲಾತಿ ಇದ್ದುಕೂಡ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುತ್ತಿರುವವರನ್ನು ನಗರದಿಂದ ಹೊರಗಿಡಬೇಕಾಗಿ ತಿಳಿಸಿದ್ದಾರೆ.
ಇವರುಗಳಿಂದ ನಗರದ ಮೂಲಕಾರ್ಮಿಕರಿಗೆ ಉದ್ಯೋಗದ ಕೊರತೆ ಹಾಗೂ ಎಲ್ಲಾ ಕ್ಷೇತ್ರಗಳಲ್ಲು ಇವರು ತಮ್ಮನ್ನು ತಾವು ತೊಡಗಿಸಿಕೊಂಡು ಮೂಲನಿವಾಸಿಗಳಿಗೆ ಉದ್ಯೋಗದಲ್ಲಿ ನಿರೀಕ್ಷಿಸಿದ ಮಟ್ಟಿಗೆ ಸಂಭಾವನೆ ದೊರೆಯುತ್ತಿಲ್ಲ.ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಗ್ರಾಮಸ್ಥರ ಅಭಿಪ್ರಾಯ ಮತ್ತು ಸಹಿಯನ್ನು ಸ್ವೀಕರಿಸಿ ಈ ಅರ್ಜಿಗೆ ಲಗತ್ತಿಸಿ ಜನಾಭಿಪ್ರಾಯವನ್ನು ಕೂಡ ಮನವಿ ನೀಡಿರುತ್ತಾರೆ.
ಈ ಇಲ್ಲಾ ಮೇಲ್ಕಂಡ ವಿಷಯಗಳನ್ನು ಪರಿಗಣಿಸಿ ಈ ಸಮಸ್ಯೆಗೆ ಪರಿಹಾರವನ್ನು ನೀಡಬೇಕಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದ ಮುಖಂಡರಾದ ಬಾಲಕೃಷ್ಣ.ಸಕಲೇಶಪುರ ತಾಲೂಕು ಸಂಯೋಜಕರಾದ ವಿಷ್ಣು ರಾವ್. ಜಿಲ್ಲಾ ಮುಖಂಡರಾದ ರಘುಪ್ರಸಾದ್. ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಾಲರಾಜು. ನಗರಧ್ಯಕ್ಷರಾದ ಮಹೇಂದ್ರ ಕುಮಾರ್, ನಗರ ಸಂಯೋಜಕರಾದ ಸುಜನ್ ಗೌಡ್ರು. ಮುಖಂಡರಾದ ರಘು ಚಂಪಕನಗರ,, ಬಿಜೆಪಿ ನಗರ ಅಧ್ಯಕ್ಷರು ಲೋಕೇಶ್, Rss ಮುಖಂಡರು ನಂದನ್, ವಕೀಲರಾದ ಸುದೀಶ್ , ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
