ಹೆತ್ತೂರು : ಇಂದು ನಡೆದ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಬಹಿಷ್ಕಾರ ಮಾಡಿದ ಗ್ರಾಮಸ್ಥರು.

ಕಾರಣ 1. ಸಭೆಗೆ ಚುನಾಯಿತ ಆದ ಕೆಲ ಸದಸ್ಯರು ಬಾರದೆ ಇದ್ದದ್ದು.

2. 57 ಇಲಾಖೆ ಅವರಿಗೆ ಆಹ್ವಾನ ಕೊಟ್ಟು ಕೇವಲ 4 ರಿಂದ 5 ಇಲಾಖೆ ಅಧಿಕಾರಿಗಳು ಬಂದಿದ್ದು.

3. ಸಭೆಗೆ ಬಂದ ಅಧಿಕಾರಿಗಳಿಗೆ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಗಳಿಗೆ ಸರಿಯಾದ ಸ್ವಾಗತ ಮಾಡುವಷ್ಟು ಸಾಮಾನ್ಯ ಜ್ಞಾನ ಇಲ್ಲಾ.

4. ಯಾವುದೇ ಕೆಲಸಗಳು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು.

5. ಕಾರ್ಯಕ್ರಮ ಹೇಗೆ ಮಾಡಬೇಕು ಅನ್ನೋ ಸಾಮಾನ್ಯ ಜ್ಞಾನ ಇಲ್ಲದೆ ಇರುವುದು.

6. ವಾರ್ಡ್ ಸಭೆ ಅಲ್ಲಿ ನೀಡಿದ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಸಭೆಗೆ ಬಂದಿದ್ದು.ಹಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ಕುಂದು ಕೊರತೆಗಳ ಬಗ್ಗೆ ಪಂಚಾಯ್ತಿ ಅವರು ಅಸಡ್ಡೆ ಮಾಡಿರುವುದು .ಬೀದಿ ದೀಪಗಳು, ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದೆ ಇರುವುದು, ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳು, ಹಲವು ಊರುಗಳಿಗೆ ರಸ್ತೆಯ ಇಲ್ಲದಿರುವುದು, ಕಾಡು ಪ್ರಾಣಿಗಳು ಮತ್ತು ಆನೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, JJM ಹೆಸರಿನಲ್ಲಿ ಇದ್ದ ರಸ್ತೆಗಳನ್ನು ಬಗೆದು ಸರಿಯಾದ ನಿರ್ವಾಣೆ ಮಾಡದೆ ಮಳೆಗಾಲದಲ್ಲಿ ಅಲ್ಲಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ತಮ್ಮ ಊರಿನ ಸಮಸ್ಯೆ ಹಾಗೂ ತಮ್ಮ ಸಮಸ್ಯೆ ಬಗ್ಗೆ ಅರ್ಜಿ ಕೊಡಲು ಹೋದಾಗ ತಮ್ಮ ವಾರ್ಡಿನ ಗೆದ್ದು ಬಂದ ಸದಸ್ಯ ಕನಿಷ್ಠ ವಾರದ ದಿನವೂ, ಅತವಾ ತಿಂಗಳಿಗೆ ಒಮ್ಮೆಯೂ ಪಂಚಾಯತಿಗೆ ಬರದೆ ಇರುವುದು.

ಹೆತ್ತೂರು ಗ್ರಾಮ ಪಂಚಾಯತಿ ಸಮಸ್ಯೆ ಬಗ್ಗೆ ಹೇಳಲು ಹೋದರೆ ಪದಗಳೇ ಸಾಲದು.ಈ ಗ್ರಾಮ ಸಭೆ ಮತ್ತೆ ನಡೆಯಬೇಕು ಎಂದು ಆದರೆ . ಮುಖ್ಯವಾಗಿ MLA ಅವರು, ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕು, ಜನರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕೊಡಿಸಬೇಕು.ನೊಂದ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು.ಕವನ ಗೌಡ ಮೆಕ್ಕಿರಮನೆ.(ರಕ್ಷಣಾ ವೇದಿಕೆ ರೈತ ಘಟಕ ಹೋಬಳಿ ಅಧ್ಯಕ್ಷರು )

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *