
ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ,ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ದಿನಾಂಕ 16/10/2025 ರಂದು ‘ವಿಶ್ವ ಆಹಾರ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಕಾಶ್ ಶೆಟ್ಟಿ. ಬಿ , ವ್ಯವಸ್ಥಾಪಕರು (ಡೈರಿ ) ಆಮೂಲ್ ,ಹಾಸನ ಹಾಗೂ ಕೃಷಿ ಮಹಾವಿದ್ಯಾಲಯದ ಡೀನ್ ರವರಾದ ಡಾ. ಕೆ . ಎನ್. ಮುನಿಸ್ವಾಮಿ ಗೌಡ, ಡೀನ್( ಕೃಷಿ) ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸಿದ್ದ ವಿವಿಧ ಆರೋಗ್ಯಕರ ಆಹಾರ ಉತ್ಪನ್ನಗಳ ಪ್ರದರ್ಶನವನ್ನು ವೀಕ್ಷಿಸಿದರು.
ಮುಖ್ಯ ಅತಿಥಿಗಳು ವಿದ್ಯಾರ್ಥಿಗಳು ತಯಾರಿಸಿದ ವಿವಿಧ ನವೀನ ಆಹಾರ ಉತ್ಪಾದನೆಗಳನ್ನ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 2025ನೇ ವಿಶ್ವ ಆಹಾರ ದಿನದ ಗೋಷ್ಠಿಯ ಅನುಸಾರವಾಗಿ ತಯಾರಿಸಿದ ಎಲ್ಲಾ ಆಹಾರ ಉತ್ಪನ್ನಗಳು ರಾಸಾಯನಿಕ ಮುಕ್ತ ಹಾಗೂ ಆರೋಗ್ಯಕರವಾಗಿದ್ದು, ಇವುಗಳನ್ನ ವಾಣಿಜ್ಯಕರಣಗಳಿಸಲು ಸಲಹೆಯನ್ನು ನೀಡಿದರು.
ಡೀನ್ ರವರು ವಿದ್ಯಾರ್ಥಿಗಳ ಪ್ರಯತ್ನ ಹಾಗೂ ಸಂಯೋಜನೆಯನ್ನು ಕಂಡು ಪ್ರಶಂಸಿಸಿದರು .ವಿಶ್ವ ಆಹಾರ ದಿನಾಚರಣೆಯ ಉಸ್ತುವಾರಿಯನ್ನು ಡಾ. ವಿಶ್ವನಾಥ ಅಂಗಡಿ, ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಇವರು ವಹಿಸಿಕೊಂಡಿದ್ದರು ಮತ್ತು ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
