ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವಯಶಸ್ವಿಯಾಗಿ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.ಇದುವರೆಗೆ 23 ಲಕ್ಷಕ್ಕೂ ಹೆಚ್ಚು ಭಕ್ತರುಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ.71000 ಹಾಗೂ 7300 ರೂ. ವಿಶೇಷಟಿಕೆಟ್‌ಗಳು ಮತ್ತು ಲಾಡು ಪ್ರಸಾದಮಾರಾಟದ ಮೂಲಕ ಸುಮಾರು 20 ಕೋಟಿಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯಿಂದ ಭಕ್ತರ ಸಂಖ್ಯೆ ಅಲ್ಪಕಡಿಮೆ ಆಗಿದ್ದು, ಇಲ್ಲಿಯವರೆಗೂ 28ಲಕ್ಷಕ್ಕೂ ಹೆಚ್ಚು ಭಕ್ತರು ದೇವಿ ದರ್ಶನಪಡೆದಿದ್ದಾರೆ ಎಂದರು.

ಭಕ್ತರ ಅತಿಯಾದ ಸಂಖ್ಯೆ ಹಿನ್ನೆಲೆಯಲ್ಲಿ ನಿನ್ನೆಪ್ರೋಟೋಕಾಲ್ ಬಂದ್ ಮಾಡಲಾಗಿತ್ತುಎಂಬುದನ್ನು ಲತಾ ಕುಮಾರಿ ಸ್ಪಷ್ಟಪಡಿಸಿದರು.

ಇಂದು ಮತ್ತು ನಾಳೆ ಭಕ್ತರ ಸಂಖ್ಯೆ ಕಡಿಮೆಇರುವುದರಿಂದ ಪ್ರೋಟೋಕಾಲ್ ವ್ಯವಸ್ಥೆಮುಂದುವರಿಸಿದ್ದರೆ ಭಕ್ತರಿಗೆ ತೊಂದರೆಆಗುತ್ತಿರಲಿಲ್ಲ ಎಂದರು.ಪ್ರೋಟೋಕಾಲ್ ಮುಗಿದ ಮೇಲೂ ಕೆಲವುಗಣ್ಯರು ಹಾಗೂ ಸ್ವಾಮೀಜಿಗಳು ಪಾಸ್ಅಥವಾ 71000 ರೂ. ಟಿಕೆಟ್ ಮೂಲಕದರ್ಶನ ಪಡೆಯುತ್ತಿದ್ದಾರೆ.

ಇಂದು ರಾತ್ರಿ 9 ಗಂಟೆಗೆ ಗರ್ಭಗುಡಿ ಬಾಗಿಲುಪೂಜೆಗಾಗಿ ಮುಚ್ಚಲಾಗುತ್ತದೆ. ನಾಳೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ದರ್ಶನ ವಿರುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *