
⚡⚡ *ಅಭಿನಂದನಾ ಸಮಾರಂಭ*⚡⚡
ಸಕಲೇಶಪುರ : ಹೆತ್ತೂರಿನಲ್ಲಿ 22ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸಾರ್ವಜನಿಕ ಗ್ರಾಮೀಣ ಕ್ರೀಡಾಕೂಟ ,ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಹಾಗೂ 33 ವರ್ಷಗಳ ಕಾಲ ಹೊಂಗಡಹಳ್ಳ ಸರ್ಕಾರಿ ಹಿರಿಯ ಪ್ರಾಥಮಿ ಪಾಠ ಶಾಲೆಯಲ್ಲಿ ಶಿಕ್ಷಕರಾಗಿ, ನಿಯೋಜನೆ ಮೇರೆಗೆ ಹೆತ್ತೂರು ಸರ್ಕಾರಿ ಪ್ರೌಢ ಶಾಲೆ, ವಣಗೂರು ಸರ್ಕಾರಿ ಪ್ರೌಢ ಶಾಲೆಗಳಲ್ಲಿ, ಕಳೆದ ಎರಡು ವರ್ಷಗಳಿಂದ ಹೆತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ದಕ್ಷ, ಪ್ರಾಮಾಣಿಕ, ಶಿಸ್ತು ಬದ್ಧವಾಗಿ ಸೇವಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ದೈಹಿಕ ಶಿಕ್ಷಕ ಹೆಚ್.ಪಿ ರಮೇಶ್ ರವರಿಗೆ ಅವರ ಸೇವೆಯನ್ನು ಗುರುತಿಸಿ . ದಿನಾಂಕ :23-10-2025 ಗುರುವಾರ. ಸಂಜೆ 6-30ಕ್ಕೆ ಸ್ಥಳ : ಗ್ರಾಮ ಪಂಚಾಯತಿ *ಡಾll ಬಿ ಆರ್ ಅಂಬೇಡ್ಕರ್ ಸಭಾಂಗಣ , ಹೆತ್ತೂರು ಇಲ್ಲಿ ಅಭಿನಂದನಾ ಕಾರ್ಯಕ್ರಮಕ ನಡೆಸಲಿದ್ದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ, ಹೆತ್ತೂರು ಹಳೆ ವಿದ್ಯಾರ್ಥಿ ವೃಂದ, ಶಿಕ್ಷಕರು,ಕ್ರೀಡಾಪಟುಗಳು, ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ತಮ್ಮಲ್ಲಿ ವಿನಂತಿ 🙏🙏
ಅಧ್ಯಕ್ಷರು /ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು,ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಹೆತ್ತೂರು.
