ಅರಸೀಕೆರೆ : ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮದೇವಿ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆ ಪೂಜೆ ಅಂಗವಾಗಿ ಹಮ್ಮಿಕೊಂ ಡಿ ದ್ದಧಾರ್ಮಿಕ ಕಾರ್ಯಕ್ರಮ ದಲ್ಲಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ದೀಪ ಬೆಳಗಿಸುವುದರ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಚಾಲನೆ ನೀಡಿದರು

ಲೋಕಕಲ್ಯಾಣಾ ರ್ಥವಾಗಿ ಪ್ರತಿ ತಿಂಗಳು ಹಮ್ಮಿಕೊಳ್ಳುವ ಅಮಾವಾಸಪೂಜೆಯಹಿನ್ನಲೆಯಲ್ಲಿ ಕೋಡಿ ಮಠದ ಶ್ರೀಗಳು ಹಣತೆ ಬೆಳಗಿಸಿ ಮಾತನಾಡಿದರು ಮನುಷ್ಯನ ಅಜ್ಞಾನ ದ ಕತ್ತಲೆಯನ್ನು ಕಳೆದು ಜ್ಞಾನ ದಾಸೋಹ ಆಚರಿಸುವ ಮೂಲಕ ಕೋಡಿಮಠ ಮಹಾ ಸಂಸ್ಥಾನದ ಪೂಜ್ಯರು ಧಾರ್ಮಿಕ ಲೋಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು

ಜ್ಞಾನ ಕೌಸಲ್ಯ ವೃದ್ಧಿಯ ಮೂಲಕಮನುಷ್ಯ ಸುಂದರ ಬದುಕು ಕಟ್ಟಿಕೊಂಡು ದಾನ ಧರ್ಮ ಮಾರ್ಗದೊಂದಿಗೆ ಜೀವನದಲ್ಲಿ ಸಮರ್ಪಣ ಭಾವ ಕಂಡುಕೊಳ್ಳಬೇಕು ಎಂದು ಹೇಳಿದರು

ಮುಂಜಾನ ಯಿಂದಲೇ ದೇವಾಲಯದಲ್ಲಿ ಮೂಗುತಿ ಸುಂದ ರಿ ಶ್ರೀಗೌರಮ್ಮ ದೇವಿಗೆ ಕುಂಕುಮಾರ್ಚನೆ ಶಿವಲಿಂಗ ಜ್ವಯ್ಯ ಹಾಗೂ ಗ್ರಾಮದ ಆರಾಧ್ಯ ದೈವಶ್ರೀ ಚನ್ನಬಸವೇಶ್ವರ ಮೂರ್ತಿಗಳಿಗೆ ರುದ್ರಾಭಿಷೇಕ ಪಂಚಾಭಿಷೇಕ ಸಹಸ್ರ ಬಿಲ್ವಾರ್ಚನೆಯನ್ನು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು

ಸ್ವಾಮೀಜಿಯವರ ಸಾನಿಧ್ಯದಲ್ಲಿ ಗೌರಮ್ಮ ದೇವಿಗೆ ಕರ್ಪೂರ ದಾರತಿಹಾಗೂ ಮಹಾಮಂಗಳಾರತಿ ಸಲ್ಲಿಸಲಾಯಿತು ನಂತರ ಬಂದಿದ್ದ ಭಕ್ತಾದಿಗಳಿಗೆ ಬೊಮ್ಮಸಮುದ್ರ ಗ್ರಾಮಸ್ಥರು ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು

ಮಾಡಾಳು ಸೇರಿದಂತೆ ಸೀತಾಪುರ ಕೊಪ್ಪಲು ಡಿ ಎಂ ಕುರ್ಕೆ ಹಾರನಹಳ್ಳಿ ಅಣ್ಣಾಯಕನಹಳ್ಳಿ ವೈ ಜಿ ಹಳ್ಳಿ ಪಿ ಹೊಸಳ್ಳಿ ಕಿತ್ತನ ಕೆರ ದೋಣನ ಕಟ್ಟೆ ಕಡಲ ಮಗೆ ಮುಂತಾದ ಗ್ರಾಮಗಳಿಂದ,ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *