
ಅರೇಹಳ್ಳಿ: ಇತ್ತೀಚೆಗೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ,ಅಂಗಡಿ, ಹಾಗು ಕಾಪಿ ತೋಟಗಳಲ್ಲಿ ಕಳವು ಪ್ರಕರಣ ಹೆಚ್ಚಾಗಿದ್ದು! ಸಾಲದಕ್ಕೆ ಕೆಲ ದಿನಗಳ ಹಿಂದೆ ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ಕನ್ನ ಹಾಕಿ ಸಾವಿರಾರು ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ವರದಿಯಾಗಿದೆ,
ಇದರ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಇದೀಗ ರಾತ್ರಿ ಸಮಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವರ ಬಗ್ಗೆ ನಿಗಾ ವಹಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಜನನಿಬಿಡ ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಬಡ ಮಹಿಳೆಯೊಬ್ಬರ ಪೆಟ್ಟಿಗೆ ಅಂಗಡಿಗೆ ಕನ್ನ ಹಾಕಿ ಸಾವಿರಾರು ಮೌಲ್ಯದ ವಸ್ತುಗಳನ್ನು ದೋಚಿದ ಬಳಿಕ ಮಕ್ಕಳ ಪೂರಕ ಪೋಷಣೆಯೊಂದಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಕೇಂದ್ರವಾದ ಲಿಂಗಾಪುರ ಅಂಗನವಾಡಿಯನ್ನು ಬಿಡದ ಖದೀಮರು ಅಲ್ಲಿದ್ದ ಸಾವಿರಾರು ಮೌಲ್ಯದ ಟಿವಿ, ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ಮಕ್ಕಳ ಆಹಾರ ಪದಾರ್ಥಗಳನ್ನು ದೋಚಿದ್ದ ಘಟನೆ ವರದಿಯಾದ ಬೆನ್ನಲ್ಲೇ ಇದೀಗ ಪೊಲೀಸರು ಹೆಚ್ಚಿನ ಅಲರ್ಟ್ ಆಗಿದ್ದಾರೆ! ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಕಳವು ಪ್ರಕರಣದಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿರುವುದಲ್ಲದೇ ರಾತ್ರಿ ಸಮಯದಲ್ಲಿ ಮನೆ ಬಿಟ್ಟು ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ!
ಈ ಸಂಬಂಧ ಎಚ್ಚೆತ್ತು ರಾತ್ರಿ ಸಮಯದಲ್ಲಿ ಗಸ್ತುನಲ್ಲಿರುವ ಪೊಲೀಸರು ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವ ಬಗ್ಗೆ ಹೆಚ್ಚಿನ ನಿಗಾ ವಹಿಸುವಲ್ಲಿ ಮಗ್ನರಾಗಿದ್ದಾರೆ. ಕಾದು ನೋಡಬೇಕಿದೆ ಯಾವ ಮಟ್ಟದಲ್ಲಿ ಖದೀಮರ ಮೇಲೆ ಪರಿಣಾಮ ಬೀರಬಹುದೆಂದು?
