ಸಕಲೇಶಪುರ: ನ. 1:ಕನ್ನಡ ರಾಜ್ಯೋತ್ಸವದ 69ನೇ ವರ್ಷದ ಅಂಗವಾಗಿ ಎಕ್ಸ್‌ಟೀಮ್ ಫಿಟ್‌ನೆಸ್ ಆ್ಯಂಡ್ ಜಿಮ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಭವ್ಯವಾಗಿ ಆಯೋಜಿಸಲಾಗಿತ್ತು.

ಈ ಶಿಬಿರವನ್ನು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಹಾಸನ ಹಾಗೂ ಪುನರ್ಜೀವ ಸ್ವಯಂಸೇವಾ ಸಂಸ್ಥೆ, ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. ಬೆಳಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ ಅನೇಕ ಮಂದಿ ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡಿದರು ಹಾಗೂ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದರು.ರಕ್ತದ ಒತ್ತಡ (BP), ಮಧುಮೇಹ (Sugar), ಹೃದಯ, ಕಣ್ಣು, ಮೂಳೆ ಮತ್ತು ಕೀಲು ತಜ್ಞರಿಂದ ತಪಾಸಣೆ ಸೇರಿದಂತೆ ಹಲವು ವಿಭಾಗಗಳ ವೈದ್ಯರು ಸೇವೆ ಸಲ್ಲಿಸಿದರು. ವೈದ್ಯರಿಂದ ಉಚಿತ ಸಲಹೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಶಾಂತ್ ಶೆಟ್ಟಿ, ಮಹಮ್ಮದ್ ಹನೀಫ್, ವಕೀಲ ಅರುಣ್, ಶಮೀಲ್ ಜಿ.ಎ., ದಿಲ್ ಶಾದ್ ಕೆ.ಎಸ್., ಇಮ್ರಾನ್ ಜಿ.ಎ., ನೌಫಲ್, ಅಶ್ರಫ್ (ಅಚ್ಚು), ಸಾಲಿ ದೋಣಿಗಾಲ್, ಮಹಮ್ಮದ್ ಅನ್ಫಾಝ್, ನವಾಜ್, ಅರ್ಶದ್ ಹಾಗೂ ಇತರರು ಭಾಗವಹಿಸಿ ಯಶಸ್ವಿಗೊಳಿಸಿದರು.

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಾಮಾಜಿಕ ಸೇವೆಯ ಹಾದಿಯಲ್ಲಿಯೂ ಒಂದು ಶ್ರೇಷ್ಠ ಕಾರ್ಯದ ಮೂಲಕ ಎಕ್ಸ್‌ಟೀಮ್ ಫಿಟ್‌ನೆಸ್ ತಂಡ ಮೆಚ್ಚುಗೆಗೆ ಪಾತ್ರವಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *