
ಬೇಲೂರು: ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಹೋಬಳಿ ಘಟಕ ವತಿಯಿಂದ ೭೦ನೇ ವರ್ಷದ ಕನ್ನಡ ರಾಜ್ಯೋತ್ಸವ ಧ್ವಜ ರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಚುಟುಕು ಸಾಹಿತಿ ಆರೋಗ್ಯ ಕಿರಿಯ ಸುರಕ್ಷಾಧಿಕಾರಿ ತಾಸಿನ ರಝಾಕ್ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಮಂಜುನಾಥ, ಬೇಬಿ, ಕಾರ್ಯದರ್ಶಿ ಚಾಮರಾಜ್, ಎಸ್. ಡಿ. ಎ. ಸುನೀತಾ, ಮಾಜಿ ಉಪಾಧ್ಯಕ್ಷ ಅನೀಲ್ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೇವರಾಜ್ ಎಸ್ ,ವಿ. ಸಂಘದ ಸದಸ್ಯರಾದ ಸೋಮಯ್ಯ ಉಡುಮನಹಳ್ಳಿ, ಸುಂದರ್, ಆಟೋ ಶ್ರೀನಿವಾಸ್, ಸಂತೋಷ್, ಲಕ್ಷ್ಮಣ್ ಶೆಟ್ಟಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.




