ಸಕಲೇಶಪುರ : ನ, ೧:ಸರ್ವ ಸಮಾಜ ಒಂದು ಗೂಡಿದರೆ ಮಾತ್ರವೇ ಡ್ರಗ್ಸ್ ಮುಕ್ತ ಸಕಲೇಶಪುರ ನಿರ್ಮಾಣ ಸಾಧ್ಯ ಎಂದು ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಎಚ್. ಎಂ. ವಿಶ್ವನಾಥ್ ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಹಳ ಉತ್ಸಾಹಕರಾಗಿದ್ದಾರೆ. ಇವರಿಗೆ ಶಕ್ತಿ ತುಂಬುವ ಕೆಲಸ ನಾವು ಮಾಡ ಬೇಕಾಗಿದೆ ಎಂದರು. ತಾಲ್ಲೂಕಿನ ಎಲ್ಲಾ ಇಲಾಖೆಯ ಸಹಕಾರ ಮತ್ತು ಸಹಯೋಗದೊಂದಿಗೆ, ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.ನಗರ ಆರಕ್ಷಕ ವೃತ್ತ ನಿರೀಕ್ಷಕ ವನರಾಜು ಮಾತನಾಡಿ,ಊರಿನ ಗಣ್ಯರು, ವಿವಿಧ ಸಂಘಟನೆಗಳು, ನಾಗರಿಕರು ಸೇರಿ ಡ್ರಗ್ಸ್ ನಿರ್ಮೂಲನಕ್ಕೆ ಮುಂದಾಗಿರುವುದು ಈ ಊರಿನ ಶ್ರೀಮಂತಿಕೆಯನ್ನು ಮತ್ತಷ್ಟು ಉನ್ನತಕ್ಕೆ ಏರಿಸಿದೆ ಎಂದ ಅವರು ಸಮಾಜದ ಸಾಮಾಜಿಕ ಪಿಡುಗಾದ ಡ್ರಗ್ಸ್ನಿರ್ಮೂಲನೆಗೆ ಪೊಲೀಸ್ ಇಲಾಖೆ ದಿನನಿತ್ಯ ಶ್ರಮಿಸುತ್ತಿದೆ. ಜನರು ಸಹಕಾರ ನೀಡಿದರೆ ಡ್ರಗ್ಸ್ ನಿರ್ಮೂಲನೆ ಸಾದ್ಯ ಎಂದರು.ಸಭೆಯಲ್ಲಿ ಜೈ ಮಾರುತಿ ದೇವರಾಜ್,ಚನ್ನವೇಣಿ ಎಂ ಶೆಟ್ಟಿ, ಶಾರದಾಗುರುಮೂರ್ತಿ, ಮಿನಾಕ್ಷಿ ಖಾದರ್, ಕಲ್ಪನ ಕೀರ್ತಿ, ಸಾಯಿರಾ ಭಾನು, ಬಸವರಾಜ್ ಬೆಳಗೋಡು, ಸಲೀಂ ಶಿಕ್ಷಕರ ಸಂಘ, ಮಂಜುನಾಥ ಸಂಘಿ , ಕೌಸಲ್ಯ ಲಕ್ಷ್ಮಣ್ ಗೌಡ, ನಿರ್ಮಲಾ ಪವಿತ್ರನ್, ಜೈ ಭೀಮ್ ಮಂಜು, ಮಲ್ನಾಡ್ ಮೆಹಬೂಬ್, ಸತ್ಯನಾರಾಯಣ ಗುಪ್ತ, ಎಸ್. ಬಿ. ಬಾಸ್ಕರ್, ಅವರೇಕಾಡು ಪೃಥ್ವಿ, ನವಿನ್ ಲಾರನ್ಸ್ , ಯೋಗೇಶ್ , ಮಹೇಶ್ , ಅಕ್ಬರ್ ಜುನೈದ್, ರವಿಕುಮಾರ್, ಅಬಕಾರಿ ಇಲಾಖೆಯ ಗೌಸ್, ಸೌಮ್ಯ, ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಪ್ರೀತು, ಯು ಪಿ ಸುರೇಶ್, ಬೆಳಗೋಡು ಬಸವರಾಜ್, ಅವರೆಕಾಡು ಪೃಥ್ವಿ, ಹರೀಶ್ ಆಚಾರ್, ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *