
ಸಕಲೇಶಪುರ : ದಿನಾಂಕ. 12.11.25. ರಂದು ತಡ ರಾತ್ರಿ 2.30 ಕ್ಕೆ ಅಕ್ರಮವಾಗಿ ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಖ್ಯೆ:-.KA 46 2572 ಇಚೆರ್ ವಾಹನದಲ್ಲಿ ಹಿಂಸಾತ್ಮಕವಾಗಿ 12 ಗಿರ್ ತಳಿ ಗೋವುಗಳನ್ನ ಅಮಾನೀಯವಾಗಿ ತುಂಬಿಕೊಂಡು ಹೋಗುತಿದ್ದ ವಾಹನದ ಮಾಹಿತಿಯನ್ನ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಇಲಾಖೆ ನೀಡಿದಾಗ ಪೊಲೀಸರು ವಾಹನ ಮತ್ತು ಗೋವುಗಳನ್ನ ಜಪ್ತಿ ಮಾಡಿ ಗೋವುಗಳನ್ನ ಶ್ರೀ ಮಹಾವೀರ್ ಗೋಶಾಲೆ ಬಾಣಾವರ ಗೋಶಾಲೆಗೆ ಕಳುಹಿಸಿಕೊಟ್ಟಿದ್ದರು.
ಬಾಣಾವರ ಗೋಶಾಲೆಗೆ ಈವರೆಗೂ ಈರೀತಿಯ ಗೋವುಗಳು ಬಂದಿರಲಿಲ್ಲ ಗಿರ್ ತಳಿಯ ಸಂತನೊತ್ಪತ್ತಿ (ಬ್ರೀಡ್)ಮಾಡುವ ತಳಿಯಾಗಿದ್ದು ಎಂದು ಗೋಶಾಲಾಯೆ ಮುಖ್ಯಸ್ಥ ಪರಾಸ್ ಅವರು ತಿಳಿಸಿದರು.
ಗೋವುಗಳನ್ನ ರಕ್ಷಣೆ ಮಾಡುವ ವಿಷಯದಲ್ಲಿ ಸಕಲೇಶಪುರದ ಹಿಂದೂ ಹಿತರಕ್ಷಣೆ ವೇದಿಕೆ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಹಿಡಿಯುತ್ತಾರೆ ಎಂದು ಪ್ರಶಂಸೆ ಮಾಡಿದ ಗೋಶಾಲೆ ತಂಡ.
ಇದೆ ಸಂದರ್ಭದಲ್ಲಿ ಗೋವುಗಳನ್ನ ರಕ್ಷಣೆ ಮಾಡಲು ಪ್ರಮುಖ ಪಾತ್ರ ವಹಿಸಿದ ಇನ್ಸ್ಪೆಕ್ಟರ್ ವನರಾಜು ಅವರ ಅನುಪಸ್ಥಿತಿಯಲ್ಲಿ ಕ್ರೈಂ ಸಬ್ಇನ್ಸಪೇಕ್ಟರ್ ಕೃಷ್ಣಪ್ಪ ಅವರಿಗೆ ಸನ್ಮಾನಿಸಿ ಶಾಲು ಹೊದಿಸಿದರು.
ಗೋರಕ್ಷಕರಾದ ಶಿವೂ@ಜಿಪ್ಪಿ ಹಾಗೂ ಮಹೇಶ್, ಮಂಜುನಾಥ್ ಕಬ್ಬಿನಗದ್ದೆ ಅವರಿಗೆ ಸನ್ಮಾನ ಮಾಡಿದರು
ಈ ಸಂದರ್ಭದಲ್ಲಿ ಭಾರತೀಯ ಗೋಪರಿವಾರ್ ಟ್ರಸ್ಟ್ ಕಿರಣ್ ಶಿವೂ ಹಾಗೂ ಹಿಂದೂ ಹಿತರಕ್ಷಣಾ ವೇದಿಕೆ ಕೌಶಿಕ್ ಹೆನ್ನಲಿ, ದೀಪಕ್, ದೀಲಿಪ್ ಉಪಸ್ಥಿತಿ ಇದ್ದರು

