ಜೈಪುರ/ಸಕಲೇಶಪುರ : ರಾಜಸ್ಥಾನದ ಜೈಪುರದಲ್ಲಿನ ಸಂಸ್ಕಾರ್ ಶಾಲೆಯಲ್ಲಿ ನವೆಂಬರ್ 14 ರಿಂದ 16ರ ವರೆಗೆ ನಡೆದ 4ನೇ ಇಂಡಿಯನ್ ಓಪನ್ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಚಾಂಪಿಯನ್‌ಶಿಪ್‌ನಲ್ಲಿ ಸಕಲೇಶಪುರದ ಮೌಂಟನ್ ಫೈಟರ್ಸ್ ಕ್ಲಬ್ ಸದಸ್ಯರಾದಉಮರ್ ಫಾರುಕ್, ಮಹಮ್ಮದ್ ಸಾಹಿಲ್, ಮಹಮ್ಮದ್ ಆಸಿಫ್, ಜೊನಿಯರ್ ಜಿವಿತಾಅವರು ಸ್ಮರಣೀಯ ಸಾಧನೆ ಮಾಡಿದ್ದಾರೆ.

ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (ಮಧ್ಯಪ್ರದೇಶ) ಆಯೋಜಿಸಿದ್ದ ಮತ್ತು MMA ಇಂಡಿಯಾ ಮಾನ್ಯತೆ ನೀಡಿದ್ದ ಈ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ದೇಶದ ವಿವಿಧ ರಾಜ್ಯಗಳಿಂದ ನೂರಾರು ಯುವ ಕ್ರಡಾಪಟುಗಳು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಮಾನ್ಯತೆ ಪಡೆದ ಈ ಸ್ಪರ್ಧೆಯಲ್ಲಿ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಟಗಾರನ ಶೌರ್ಯ, ಶಿಸ್ತು ಮತ್ತು ತಾಳ್ಮೆಯನ್ನು ಮೆಚ್ಚಿದ ಅಧಿಕಾರಿಗಳು, ಭವಿಷ್ಯದ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ AMMAF ಉಪಾಧ್ಯಕ್ಷ ಶರೀಫ್ ಬಾಪು, MMA ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೈತೊಂಡೆ, MMA ಇಂಡಿಯಾ ನಿರ್ದೇಶಕ ವಿಕಾಸ್ ಶರ್ಮಾ, ಹಾಗೂ ಇಂಡಿಯನ್ ಓಪನ್ ಆಯೋಜನಾ ಅಧ್ಯಕ್ಷ ಸುನಿಲ್ ಮುಡ್ಗಲ್ ಅವರು ಉಪಸ್ಥಿತರಿದ್ದು ಪ್ರಶಂಸಿಸಿದ್ದಾರೆ.

ಉಮರ್ ಫಾರುಕ್, ಮಹಮ್ಮದ್ ಸಾಹಿಲ್, ಮಹಮ್ಮದ್ ಆಸಿಫ್, ಜೊನಿಯರ್ ಜಿವಿತಾ ಈ ಸಾಧನೆಗೆ ಕರ್ನಾಟಕದ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *