ಸಕಲೇಶಪುರ : ಜೆಎನ್‌ಎಸ್‌ ಪ್ರೌಢಶಾಲೆ ಕೌಡಳ್ಳಿಯಲ್ಲಿ ಜರುಗಿದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಉಪನ್ಯಾಸ ಕಾರ್ಯಕ್ರಮ

ವಚನ ಸಾಹಿತ್ಯ ಮನುಷ್ಯರ ಬದುಕನ್ನು ಕಲಾತ್ಮಕಗೊಳಿಸುತ್ತದೆ-ಸಹಾಯಕ ಪ್ರಾಧ್ಯಾಪಕ ಮಂಜುನಾಥ ಆರ್ ರವರ ಅಭಿಮತ

ಕೌಡಳ್ಳಿ:- ದಿನಾಂಕ: 20-11-2025 ರ ಗುರುವಾರದಂದು ಮಧ್ಯಾಹ್ನ 3.00 ಗಂಟೆಗೆ ಜೆಎಸ್ಎಸ್ ಪ್ರೌಢಶಾಲೆ, ಕೌಡಳ್ಳಿ ಸಕಲೇಶಪುರಇಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು ಘಟಕ ಸಹಯೋಗದೊಂದಿಗೆ ಹಬ್ಬಸಾಲೆ ಲಿಂಗೈಕ್ಯ ದೇವಮ್ಮ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯವನ್ನು ಕುರಿತು ಜೆಎನ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಆರ್ ರವರು ಉಪನ್ಯಾಸ ನೀಡುತ್ತಾ, ಮಾನವೀಯ ಮೌಲ್ಯಗಳು ಹಾಗೂ ವಚನ ಸಾಹಿತ್ಯದ ಪರಿಕಲ್ಪನೆಯನ್ನು ನಿದರ್ಶನ ಸಹಿತ ಉಪನ್ಯಾಸ ನೀಡಿ ಶರಣ ಸಾಹಿತ್ಯ ಮನುಷ್ಯರ ಬದುಕನ್ನು ಕಲಾತ್ಮಕಗೊಳಿಸುತ್ತದೆ ಪ್ರತಿ ದಿನ ಒಂದು ವಚನವನ್ನು ಕಲಿತು ಅರ್ಥ ಮಾಡಿಕೊಂಡರೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಭೆಯನ್ನು ಉದ್ಘಾಟಿಸಿದ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಉಪಾಧ್ಯಕ್ಷರಾದ ರಾಜೇಗೌಡರವರು ಬಸವಣ್ಣನವರು ಜಾತಿ, ಧರ್ಮ ಹಾಗೂ ಮೌಲ್ಯಗಳ ಬಗ್ಗೆ ಸವಿಸ್ಥಾರವಾಗಿ ತಿಳಿಸಿದರು.

ಯಡೇಹಳ್ಳಿ ಆರ್ ಮಂಜುನಾಥ್ ಪ್ರಾಸಾವಿಕ ನುಡಿಯನ್ನುಮಾತನಾಡುತ್ತಾ ಶರಣೆ ಪುಷ್ಪ ಮತ್ತು ಶರಣ ದೇವರಾಜು ರವರು ಈಗ ನೀಡುತ್ತಿರುವ ದತ್ತಿ 774ನೆಯದಾಗಿರುತ್ತದೆ ಎಂದು ಹೇಳಿ ಸಕಲೇಶಪುರ ಭಾಗದಲ್ಲಿ ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿಗಳಾದ ಸುರೇಂದ್ರ.ಟಿ.ಪಿ ರವರು ವಚನಗಳ ಮೌಲ್ಯಗಳ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಸಮಸ್ತರಿಗೂ ತಿಳಿಸಿದರು.

ಲೋಹಿತ್ ಅಧ್ಯಕ್ಷರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಸಕಲೇಶಪುರ ಇವರು ಶರಣರ ಬದುಕು. ಶರಣ ವಿಚಾರಧಾರೆಗಳನ್ನು ಬಾಲ್ಯಾವಸ್ಥೆಯಲ್ಲೆ ಬೆಳೆಸಿಕೊಳ್ಳಬೇಕು ಆ ಮೂಲಕ ಸಮಾಜ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ರೇಣುಕಾರಾಧ್ಯ, ಮುಖ್ಯಶಿಕ್ಷಕರು ಇವರ ಅಧ್ಯಕ್ಷೀಯ ಭಾಷಣವನ್ನು ನುಡಿದು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಸರ್ವರನ್ನು ಅಭಿನಂದಿಸಿ, ವಚನ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ದತ್ತಿ ದಾನಿಗಳಾದ ಶರಣ ದೇವರಾಜು ರವರು, ಶರಣೆ ಬಿ.ಇಡಿ ಕಾಲೇಜಿನ ಸಂಯೋಜನಾಧಿಕಾರಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಆ‌ರ್ ರವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಕಲೇಶಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಾರದಾ ಗುರುಮೂರ್ತಿ, ಮೀನಾಕ್ಷಿ ಖಾದ‌ರ್, ಕಾಫಿ ಬೆಳೆಗಾರರಾದ ವೈ ಎಸ್ ಗಿದೀಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕರಾದ ಚೆನ್ನಬಸಪ್ಪ ಗುಡಿದನ್ನಿ, ವಿದ್ಯಾರ್ಥಿನಿ ಫಾತಿಮತ್ ಸೈಮಾರವರು ಸ್ವಾಗತಿಸಿದರು.

ವಿದ್ಯಾರ್ಥಿನಿ ಲಾವಣ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ವಚನಗಾಯನವನ್ನು ಏರ್ಪಡಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *