
ಆಲೂರು : ದಿನಾಂಕ 23/11/2025ರಂದು, ಆಲೂರು ತಾII ಕೆ.ಹೊಸಕೋಟೆ ಹೋಬಳಿ, ಹರಿಹಳ್ಳಿ ಗ್ರಾಮದಲ್ಲಿ ಶ್ರೀ ಕೆಂಚಾಂಬ ಕಲಾ ಸಂಘ (ರಿ) ಹರಿಹಳ್ಳಿ ಹಾಗೂ ಮಂಗಳ ಕಲಾಸಾಹಿತ್ಯ ವೇದಿಕೆ ಹರಿಹಳ್ಳಿ ಘಟಕ ಇವರ ಸಹಯೋಗದಲ್ಲಿ, “ಜಾನಪದ ಕಲಾ ಸೌರಭ 2025-26” ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕರಾದ, ಹಂಜಳಿಗೆ ಮಂಜುನಾಥ್ ಕಾಳಿಂಗಪ್ಪ ಉದ್ಘಾಟಿಸಿ ಮಾತನಾಡಿದ ಶ್ರೀಯತರು ಜಾನಪದ ಕಲೆ ಎನ್ನುವುದು ತುಂಬಾ ವಿಶೇಷ ಹಾಗೂ ಹೃದಯಕ ಮುಟ್ಟುವಂತ ಕಲೆಯಾಗಿದೆ. ಏಕೆಂದರೆ ಹಿಂದೆ ಸಿನಿಮಾ TV ಮತ್ತು ಮೊಬೈಲ್ ಭರಾಟೆ ಇರಲಿಲ್ಲ. ಆದ್ದರಿಂದ ಜನರು ತಮ್ಮ ತಮ್ಮಲ್ಲೆ ಪದ ರಚನೆ ಮಾಡಿ, ಭತ್ತ ಕುಟ್ಟುವಾಗ, ರಾಗಿ ಬೀಸುವಾಗ, ಗದ್ದೆ ನಾಟಿ ಮಾಡುವಾಗ, ಜನಪದ ಹಾಡನ್ನ ಹಾಡಿ, ಮನಸ್ಸನ್ನು ಮುದಗೊಳಿಸುತ್ತಿದ್ದರು. ಈಗ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ಇವುಗಳು ಮರೆಯಾಗುತ್ತಿರುವುದು ತುಂಬಾ ದುರದೃಷ್ಠ. ಈ ಕಲೆಯನ್ನು ಶಿಕ್ಷಕರು ಹಾಗೂ ಜಾನಪದ ರಾಷ್ಟ್ರೀಯ ಕಲಾವಿದರೂ ಆದ ಹೆಚ್ ಡಿ ಸೋಮೇಶ್ ರವರು ಜನಪದ ಕಾರ್ಯಕ್ರಮ ಮಾಡಿ, ಹಿಂದಿನ ಜನಪದ ಕಲೆ ನೆನಪಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷರಾದ ಹೇಮಾ ಲೋಕೇಶ್ ರವರು, ತುಂಬಾ ವರ್ಷದಿಂದ ಶಿಕ್ಷಕರು ಹಾಗೂ ಕಲಾವಿದರಾದ ಹೆಚ್.ಡಿ. ಸೋಮೇಶ್ ರವರು ನಮ್ಮ ಭಾಗದಲ್ಲಿ ಶ್ರೀ ಕೆಂಚಾಂಬ ಕಲಾ ಸಂಘ ಸ್ಥಾಪಿಸಿ ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರಮಟ್ಟದ ಕಲಾವಿದರನ್ನು ಕರೆಸಿ, ಜನಪದ ಕಲೆ ಪ್ರದರ್ಶನ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಾಗಿ ಹಾ.ಜಿ.ಸ. ಕೇ ಬ್ಯಾಂಕ್. ನಿರ್ದೇಶಕರಾದ ಕೆ.ಎಸ್. ಮಂಜೇಗೌಡ, ಮಂಗಳ ಕಲಾಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಹೆಚ್.ಆರ್ ಕೃಷ್ಣಮೂರ್ತಿ. ಕಾರ್ಯದರ್ಶಿ ಹೆಚ್ ಎನ್ .ಸತ್ಯನಾರಾಯಣ, ಶ್ರೀಕೆಂಚಾಂಬ ಸಂಘದ ಅಧ್ಯಕ್ಷರಾದ ಆರ್. ಯೋಗೇಶ್, ಉಪಾಧ್ಯಕ್ಷರಾದ ಎನ್.ಎಸ್ ನಾಗರಾಜ್ . ಗ್ರಾಪಂ.ಸದಸ್ಯರಾದ ಹೆಚ್ ಕೆ ಚಂದ್ರಶೇಖರ್, ತೇಜಾವತಿ, ಮಂಜುಳ ನಾಗರಾಜ್, ನಿವೃತ್ತ ಸೈನಿಕರಾದ ವೆಂಕಟೇಶ್ ಹೊಸ ಹಳ್ಳಿ. ರೈತಮುಖಂಡ ಹೈದೂರು ಜಯಣ್ಣ, ಮುಂತಾದವರು ಹಾಜರಿದ್ದರು.
ನಂತರ 1)ಜನಪದ ನೃತ್ಯ : ರಾಣಿ ಚರಾಶ್ರೀ ಮತ್ತು ತಂಡ ಸೋಮನಹಳ್ಳಿ. 2) ಕೋಲಾಟ : ಗಾಯಿತ್ರಿ ಪ್ರಕಾಶ್ ಮತ್ತು ತಂಡ ವಿದ್ಯಾನಗರ, ಹಾಸನ 3) ಜಾನಪದ ಗೀತೆಗಳು : ಚಂದ್ರಮ್ಮ ಕಾಳೇಗೌಡ ಮತ್ತು ತಂಡ ಹೊಯ್ಸಳನಗರ. 4) ತತ್ವಪದ : ದುದ್ದ ಯೋಗೇಂದ್ರ ಮತ್ತು ತಂಡದವರಿಂದ, ಜಾನಪದ ಕಲಾಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ವೈಚಾರಿಕ ಪತ್ರಿಕೆಯ ಪತ್ರಕರ್ತರಾದ ಮೋಹನ್ ರವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಸೋಮೇಶ್ ಸ್ವಾಗತಿಸಿ, ವಂದಿಸಿದರು.







