
ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ವತಿಯಿಂದ ದಿನಾಂಕ 26-11-2025 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಹೆಚ್. ಜೆ. ಅಮರೇಂದ್ರ, ರವರು ಮಾತಾನಾಡಿ ನಮ್ಮ ಮನೋಇಚ್ಚ ಶಕ್ತಿಯ ಪ್ರಕಾರ ಕೇಲಸ ಮಾಡಬೇಕು , ಉತ್ತಮ ಕೆಲಸ ಮಾಡಬೇಕು ಎಂಬ ಮನೋಭಾವನೆ ನಮ್ಮಲ್ಲಿ ಇರಬೇಕು. ಅಗಿದ್ದಲ್ಲಿ ಸಂವಿಧಾನದ ಅರ್ಥಪೂರ್ಣತೆಗೆ ನಾವು ಗೌರವ ನಿಡಿದಂತಾಗುತ್ತದೆ. ನಾವೇಲ್ಲ ಭಾರತೀಯರು ಸಂವಿಧಾನಕ್ಕೆ ಗೌರವ ನಿಡುತ್ತೇವೆ, ಕಾನೂನಾತ್ಮಕ, ಆಡಳಿತ ಸುಧಾರಣೆ, ಸಾಮಾಜಿಕ, ಅರ್ಥೀಕ ರಂಗದಲ್ಲಿ ಸಂವಿಧಾನ ನಿಡಿರುವ ಭಾರತದ ಜನತೆಯಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮ ನೀರಪೇಕ್ಷ ಪ್ರಜಸತ್ತಾತ್ಮಕ ಗಣರಾಜ್ಜಯವಾಗಿದೆ.ಸಾಮಾಜಿಕ, ಅರ್ಥೀಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಭಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನ ಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಡ ಸಂಕಲ್ಪ ಮಾಡಬೇಕೇಂದರು.1949 ನೆಯ ಇಸವಿಯ ನವಂಬರ್ ತಿಂಗಳ 26 ನೇ ದಿನದಂದು ಈ ಸಂವಿಧಾನ ವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿ ಕೊಂಡಿದ್ದೇವೆ. ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿ ಕ್ಷೇಮಭೀವೃದ್ದಿ ಅಧೀಕಾರಿಗಳಾದ ಡಾ ಇಂದ್ರ ಬಹುದ್ದೂರು ರವರು ಭಾರತ ಸಂವಿಧಾನದ ಪೀಠಿಕೆ ಯನ್ನು ಓದುವ ಮೂಲಕ ಪ್ರತಿಜ್ಞಾ ಸ್ವೀಕರಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜು ನಿರ್ಧೇಶಕರಾದ ಡಾ. ಎಸ್. ಪ್ರಧೀಪ್, ನಿವೃತ್ತ ಪ್ರಾಂಶುಪಾಲರಾದ ಡಾ ಎ ಜೆ ಕೃಷ್ಣಯ್ಯ, ವಿದ್ಯಾರ್ಥಿ ಕ್ಷೇಮಭೀವೃದ್ದಿ ಸಹ ಅಧೀಕಾರಿ ಡಾ ಶಿವಶಂಕರ್ ವೇಧಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಡಿನ್ ರವರು, ವಿಭಾಗದ ಮುಖ್ಯಸ್ಥರು, ನೌಕರರು, ವಿದ್ಯಾರ್ಥಿಗಳು ಪಾಲುಗೊಂಡಿದ್ದರು,



