
ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ ಮಾತನಾಡಿ ಲಯನ್ಸ್ ಕ್ಲಬ್ ವತಿಯಿಂದ ವತಿಯಿಂದ ಪ್ರತಿ ತಿಂಗಳು ಸಂಸ್ಥೆ ವತಿಯಿಂದ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅದರಂತೆ ಈ ತಿಂಗಳು ಸರ್ಕಾರಿ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳ ಮುತ್ತಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಯ ಮುಖ್ಯ ದ್ವಾರಕ್ಕೆ ಗೇಟ್ ಅಳವಡಿಸಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು.
ನಂತರ ಮಾತನಾಡಿದ ಕೆಂಚಮ್ಮ ಹೊಸಕೋಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕುಮಾರ್ ಬೆಂಬಳೂರು ಮಾತನಾಡಿ ಲಯನ್ಸ್ ಸೇವಾ ಸಂಸ್ಥೆ ಪ್ರತಿ ವರ್ಷವೂ ಅನೇಕ ಸೇವ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ವರ್ಷವೂ ಸಹ ಸ್ವಚ್ಛತಾ ಕಾರ್ಯಕ್ರಮ,ಅಂಗನವಾಡಿ ಮಕ್ಕಳಿಗೆ ಸ್ಮಾರ್ಟ್ ಬೋರ್ಡ್ ರೈಟಿಂಗ್ ಪ್ಯಾಡ್ ವಿತರಣೆ, ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಅದರಂತೆ ಈ ತಿಂಗಳು ಮುತ್ತಿಗೆ ಶಾಲೆಗೆ ಸರ್ಕಾರಿ ಶಾಲೆಗಳಿಗೆ ಗೇಟ್ ವ್ಯವಸ್ಥೆ ಮಾಡಲಾಯಿತು.ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಇಂಥ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನಡೆಯುತ್ತಿರುವ ಎಲ್ಲಾ ಸದಸ್ಯರುಗಳಿಗೂ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ, ಖಜಾಂಚಿ ರಮೇಶ್ ಕುರೇಗಲ್, ಕಾರ್ಯದರ್ಶಿ ಕುಮಾರ್ ಬೆಂಬಳೂರು, ಮಾಜಿ ಅಧ್ಯಕ್ಷ ಕುಮಾರ್ ಕೆ ಎನ್, ಕೆ ಬಿ ಕುಮಾರ್, ಮೋಹನ್ ಕಾಡ್ಲೂರು, ಮಾ ಜಿ. ಗ್ರಾಮ ಪಂಚಾಯತಿ ಸದಸ್ಯ ರುದ್ರೇಶ್, ದರ್ಶನ್ ಸಂಸ್ಥೆಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.





