ಸಕಲೇಶಪುರ : ಚಂಗಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆಯಾಗಿದ್ದಾರೆ.ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆಈ ಹಿಂದಿನ ಅಧ್ಯಕ್ಷರಾದ ಕಾಂಗ್ರೆಸ್ ಬೆಂಬಲಿತ ಜಗದೀಶ್ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಲೋಕೇಶ್ 5 ಮತಗಳನ್ನು ಪಡೆದರೆ ಅವರ ಎದುರಾಳಿ ಪಾರ್ವತಿ 4 ಮತಗಳನ್ನು ಪಡೆದು ಪರಾಜಿತಾರಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯತ್ ಇ. ಓ ಗಂಗಾಧರ್ ಕಾರ್ಯ ನಿರ್ವಹಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮಾತನಾಡಿ ಚಂಗಡಿಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಕೆಲವು ಕಾರಣ ಗಳಿಂದ ತಪ್ಪಿದ ಅಧಿಕಾರ ಪುನ: ಬಿಜೆಪಿ ಗೆ ದೊರಕಿದೆ.

ಇದು ಶಾಸಕ ಸಿಮೆಂಟ್ ಮಂಜುರವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂಬರುವ ಚುನಾವಣೆ ಗಳಲ್ಲಿ ಬಿಜೆಪಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಅನುಮಾನ ವಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ನೇತ್ರಾ, ಮಧು, ಸುಧಾ, ಕುಮಾರ ಸ್ವಾಮಿ ಪಕ್ಷದ ಮುಖಂಡರುಗಳಾದ ಸವಿನ್ ಗೌಡ, ಧರಣೇಶ್,ನವೀನ್ ಬಸಗುಳ, ಕಿರಣ್ ನಾರೂರು, ಸಚ್ಚಿನ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *