ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಫುಡ್ ಕಿಟ್ ಯೋಜನೆ ಅನುಷ್ಠಾನ ಸಂಬಂಧ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಅನ್ನ ಭಾಗ್ಯ ಯೋಜನೆ ಅಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಸಮಗ್ರ ಪೋಷಣೆ ಮತ್ತು ಆಹಾರ ಪದ್ಧತಿ ಉಪಕ್ರಮದ ಅಡಿ ಇಂದಿರಾ ಕಿಟ್ ವಿತರಿಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಹಾಗಾಗಿ ಪ್ರತಿ ತಿಂಗಳು 10 ನೇ ತಾರೀಖಿನಂದು ಇಂದಿರಾ ಫುಡ್ ಕಿಟ್ ವಿತರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ಹೆಚ್ಚುರಿಯಾಗಿ ನೀಡುತ್ತಿರುವ 5 ಕೆಜಿ ಅಕ್ಕಿ ಬದಲು ತೊಗರಿಬೇಳೆ ಸೂರ್ಯಕಾಂತಿ ಎಣ್ಣೆ ಸಕ್ಕರೆ, ಉಪ್ಪು ವಿತರಿಸಲು ನಿರ್ಧರಿಸಲಾಯಿತು. ಪ್ರತಿ ತಿಂಗಳು 1,25,08,262 ಇಂದಿರಾ ಫುಡ್ ಕಿಟ್ ಅಗತ್ಯವಿದೆ. ಪ್ರತಿ ತಿಂಗಳು 466 ಕೋಟಿ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಪ್ರತಿ ತಿಂಗಳು 18,628 ಮೆಟ್ರಿಕ್ ಟೆನ್ ತೊಗರಿ ಬೆಳೆ,12,419 ಮೆಟ್ರಿಕ್ ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ಅಗತ್ಯವಿದೆ ಪೌಷ್ಟಿಕಾಂಶದಿಂದ ಕೂಡಿರುವ ತೊಗರಿಬೇಳೆ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೇಂದ್ರ ಆಹಾರ ಉತ್ಪನ್ನ ಸರಬರಾಜು ಸಂಸ್ಥೆಯ ಮೂಲಕ ಖರೀದಿ ಪ್ರಕ್ರಿಯೆ ನಡೆಯಲಿದ್ದು ಪಾರದರ್ಶಕವಾಗಿ ಕೆಟಿಪಿಪಿ ಅನ್ವಯ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟ ಆಹಾರ ಸಾಮಗ್ರಿ ಪೂರೈಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಆಗಬಾರದು ಅಳತೆಯಲ್ಲಿ ಹೆಚ್ಚು ಕಡಿಮೆ ಆಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ದೂರಿಗೆ ಅವಕಾಶವಾಗದಂತೆ ಈ ಒಂದು ಯೋಜನೆ ಅನುಷ್ಠಾನ ಆಗಬೇಕು. ಇಂದಿರಾ ಫುಡ್ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಅಳವಡಿಸಿ.

ಅದರ ಆಧಾರದಲ್ಲಿ ಪಡಿತರ ಚೀಟಿದಾರರಿಗೆ ಫುಡ್ ಕಿಟ್ ವಿತರಿಸಿ. ಸರಬರಾಜದ ಇದರ ಫುಡ್ ಕಿಟ್ಟುಗಳನ್ನು ನಿಗಮದ ಗೋದಾಮು, ಸಗಟು ಮಳಿಗೆಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಬೇಕು ಪ್ರತಿ ತಿಂಗಳು 10 ನೇ ತಾರೀಕಿನೊಳಗೆ ಇಂದಿರಾ ಫುಡ್ ವಿತರಿಸಬೇಕು ಆಹಾರ ಮಂತ್ರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *