ಸಕಲೇಶಪುರ : ಡಿಸೆಂಬರ್ 6 ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆ ದಿನ ಅಂಗವಾಗಿ ಇಂದು ಪಟ್ಟಣದ ಪ್ರೇಮ ನಗರ ಬಡಾವಣೆಯ ಸಮೀಪವಿರುವ ರುದ್ರ ಭೂಮಿಯನ್ನು ಕುಶಲನಗರ ಬಡಾವಣೆಯ ಗ್ರಾಮಸ್ಥರು ಹಾಗೂ ಕೌಡಹಳ್ಳಿ ಗ್ರಾಮದ ಗ್ರಾಮಸ್ಥರು ಸೇರಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರಮದಾನ ಮಾಡಿದ ಯುವಕ ಮಿತ್ರರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಮುನ್ನ ದಿನ ನಮ್ಮ ಸಮುದಾಯದ ರುದ್ರ ಭೂಮಿಯನ್ನು ಸಾಮೂಹಿಕವಾಗಿ ಸ್ವಚ್ಛತೆ ಮಾಡುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಕಾಡಪ್ಪ, ಪುರಸಭೆಯ ಮಾಜಿ ಸದಸ್ಯ ಜೈ ಭೀಮ್ ಮಂಜು. ಆನೆ ಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಯ್ಯ, ಜೈ ಭೀಮ್ ಯುವಕ ಸಂಘದ ಮಾಜಿ ಅಧ್ಯಕ್ಷರಾದ ರಾಮು ಮಧುವರನ್, ಎಸ್ ಬಿ ಮಂಜುನಾಥ್, ಪೇಪರ್ ಮಂಜು, ದೇವರಾಜು ಯೋಗೇಶ್ ನಾಗೇಶ್ ಸತೀಶ್ ಕುಮಾರಸ್ವಾಮಿ ಪ್ರಸನ್ನ ಪ್ರಕಾಶ್ ಈರಪ್ಪ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *