
ಸಕಲೇಶಪುರ:ಡಿ,6: ತಾಲ್ಲೂಕಿನ ಮಂಜ್ರಾಬಾದ್ ದರ್ಗಾ ಸಮೀಪ ಚಲಿಸುತ್ತಿದ್ದ ಡೆಸ್ಟರ್ ಕಾರಿಗೆ ಬೆಂಕಿ ತಗುಲಿ ದಂಪತಿಗಳು ಪ್ರಾಣಾಪಾಯದಿಂದ ಪರಾಗಿರುವ ಘಟನೆ ನಡೆದಿದೆ.
ಬೆಂಗಳೂರು ನಿವಾಸಿಗಳಾದ ನವೀನ್ (32) ಮತ್ತು ಮಾನಸ(28) ಧರ್ಮಸ್ಥಳ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ, ಕಾರಿನ ಹಿಂದಿನ ಚಕ್ರ ಪಂಚರ್ ಆಗಿ ಡಿವೆಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ತುರ್ತಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಕ್ಸ್: ಪತ್ರಿಕೆಯೊಂದಿಗೆ ಮಾತನಾಡಿದ ವಾಹನ ಚಾಲಕ ಮತ್ತು ಮಾಲೀಕ ನವೀನ್ ನಾವುಗಳು ಬೆಂಗಳೂರು ನಿವಾಸಿಗಳಾಗಿದ್ದು ಧರ್ಮಸ್ಥಳಕ್ಕೆ ತೆರಳುತ್ತಿದ್ದೆವು. ಆಗ ಮಂಜ್ರಾಬಾದ್ ದರ್ಗಾ ಸಮೀಪದಲ್ಲಿ ಕಾರಿನ ಹಿಂದಿನ ಚಕ್ರ ಪಂಚರ್ ಅಯಿತು ವಾಹನ ನಿಯಂತ್ರಣ ತಪ್ಪಿತ್ತು ನಂತರ ಪಕ್ಕದ ಗೆರೆಗೆ ಡಿಕ್ಕಿ ಹೊಡೆಯಿತು ಇದ್ದಕ್ಕಿದ್ದ ಹಾಗೆ ಬೆಂಕಿ ತಗಲಿಕೊಂಡಿತ್ತು.
ವಾಹನದ ಹಿಂಭಾಗದಲ್ಲಿ ಇದ್ದ ಲಾರಿ ಚಾಲಕ ಬೆಂಕಿ ನಂದಿಸಲು ಪ್ರಯತ್ನಿಸಿದ ತುರ್ತಾಗಿ ಅಗ್ನಿಶಾಮಕ ದಳದವರು ಬಂದರು ನಮಗೆ ಯಾವುದೇ ರೀತಿಯ ಗಾಯಗಳು ಸಂಭವಿಸಲಿಲ್ಲ ಎಂದು ಹೇಳಿದರು.
