
ಆಲೂರು : ಪಿ ಎಂ ಶ್ರೀ – GHPS ಕೆ. ಹೊಸಕೋಟೆ ಶಾಲೆಯಲ್ಲಿ 2025- 26 ನೇ ಸಾಲಿನ FLN “ಕಲಿಕಾ ಹಬ್ಬ”ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು
ತಾಲೂಕಿನ ಕೆ ಹೊಸಕೋಟೆ ಹೋಬಳಿಯ ಪಿ ಎಂ ಶ್ರೀ GHPS -ಕೆ . ಹೊಸಕೋಟೆ ಶಾಲೆಯಲ್ಲಿ ಎಫ್. ಎಲ್. ಎನ್ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಶರೀಫ ಉದ್ಘಾಟನೆ ಮಾಡಿದರು ಬಿ ಆರ್ ಪಿ ಪ್ರಮೀಳಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.
ಪ್ರಥಮ ಸ್ಥಾನವನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಹೊಸಕೋಟೆ ದ್ವಿತೀಯ ಸ್ಥಾನವನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಡ್ಲೂರು ತೃತೀಯ ಸ್ಥಾನವನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತಿಗೆ ಮಕ್ಕಳು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಿ ಆರ್ ಪಿ ಮೈಮುನ, ಜಿಎಚ್‌ಪಿಎಸ್ ಕೆ ಹೊಸಕೋಟೆ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ, ಕೆಪಿಎಸ್ ಶಾಲೆಯ ಶಿಕ್ಷಕಿ ದ್ರಾಕ್ಷಾಯಿಣಿ, ಕೆ ಹೊಸಕೋಟೆ ಶಾಲೆಯ ಎಲ್ಲಾ ಸಹ ಶಿಕ್ಷಕರುಗಳು ಮಕ್ಕಳು, ಎಲ್ಲಾ ಶಾಲೆಗಳ ಶಿಕ್ಷಕರುಗಳು ಮಕ್ಕಳು ಉಪಸ್ಥಿತರಿದ್ದರು.

