ಸಕಲೇಶಪುರ : ಫೆಬ್ರವರಿ 14 2019 ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಲಿದಾನ ಸ್ಮರಣಾರ್ಥವಾಗಿ ಸಕಲೇಶಪುರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಬಿಜೆಪಿ ಶಾಸಕ ಸಿಮೆಂಟ್ ಮಂಜುನಾಥ್ ಅವರು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಯೋಧರು ಭಯೋತ್ಪಾದಕರ ದಾಳಿಗೆ ಬಲಿಯಾದ ಈ ದಿನವನ್ನು ನಾವು ನೆನಪಿನಲ್ಲಿ ಇಟ್ಟುಕೊಂಡು ಹುತಾತ್ಮರಾದ ಯೋಧರನ್ನು ಸ್ಮರಿಸಬೇಕು. ಯುವ ಪಡೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಒಲವು ಬಿಟ್ಟು ದೇಶಕ್ಕಾಗಿ ಸಮರ್ಪ ಭಾವವನ್ನು ಬೆಳೆಸಿಕೊಂಡರೆ ಈ ಭಾರತ ದೇಶ ಬಲಿಷ್ಠವಾಗಲಿದೆ ಎಂದರು.

ಏಲಕ್ಕಿ ಉದ್ಯಮಿ ಚಂದ್ರಶೇಖರ್ ಮಾತನಾಡಿ ರಾಷ್ಟ್ರ ಜಾಗೃತಿಯ ಕಾರ್ಯದಲ್ಲಿ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕು ಯುವಪೀಳಿಗೆ ಜಾಗೃತಿಯಾದರೆ ದೇಶ ಬದಲಾಗುತ್ತದೆ ಈ ರೀತಿಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದರು.

ನೂತನ ನೌಕರರ ಸಂಘದ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಶಾಂತರಾಜ್ ಸೇರಿದಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಮಂಜುನಾಥ್ ಕಬ್ಬಿನಗದ್ದೆ. ದುಶ್ಯಾಂತ್ ಗೌಡ. ಕೌಶಿಕ್ ಹೆಚ್.ಎಂ. ಶಿವು ಜಿಪ್ಪಿ. ಸೇರಿದಂತೆ ರಘು ಜೀ ಯುವ ಬ್ರಿಗೇಡ್’ನ ಸಂಯೋಜಕ್ ಜತಿನ್ ಕುಮಾರ್. ಹರ್ಷ. ಸೇರಿದಂತೆ ನಗರದ ಹೊಸ ಬಸ್ ನಿಲ್ದಾಣದ ಸುತ್ತ ಮುತ್ತಲಿನ ಸಾರ್ವಜನಿಕರು ಭಾಗವಹಿಸಿ ಹುತಾತ್ಮ ಯೋದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಗವಹಿಸಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *