ಹಾಸನ : ದಿನಾಂಕ : 11-02-2026 ನೇ ಬುಧವಾರ ಸಂಜೆ 7- 30 ಗಂಟೆಗೆ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಹಾಸನದ KIADB ರಸ್ತೆಯಲ್ಲಿರುವ *ಸನ್ ರೈಸ್ ಭವನದಲ್ಲಿ* ವಿಶೇಷ ವಾರದ ಸಭೆಯನ್ನು ಏರ್ಪಡಿಸಲಾಗಿತ್ತು.

*ಕ್ಯಾನ್ಸರ್ ಬಗ್ಗೆ ಜಾಗೃತಿ* ಇದೆ ಸಂದರ್ಭದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ವನ್ನು ವಿಶ್ವ ಕ್ಯಾನ್ಸರ್ ಡೇ ಪ್ರಯುಕ್ತ ಏರ್ಪಡಿಸಲಾಗಿತ್ತು. ಹಾಸನ ನಗರದ ಹೆಸರಾಂತ ENT ತಜ್ಞರಾದ *ಡಾ!! ನಾಗೇಶ್* ರವರು ಮಾತನಾಡಿ ಕ್ಯಾನ್ಸರ್ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಇದು ವಿಶ್ವಾದ್ಯಂತ ಕ್ಯಾನ್ಸರ್‌ನ ಹೆಚ್ಚುತ್ತಿರುವ ಹೊರೆಯನ್ನು ಎತ್ತಿ ತೋರಿಸುತ್ತದೆ. ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆಯನ್ನು ಈ ದಿನ ಪ್ರೋತ್ಸಾಹಿಸುತ್ತದೆ. ಜೀವನಶೈಲಿಯ ಬದಲಾವಣೆಗಳು ಮತ್ತು ನಿಯಮಿತ ತಪಾಸಣೆಯ ಮೂಲಕ ಅನೇಕ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು. ಆರಂಭಿಕ ರೋಗ ನಿರ್ಣಯವು ಬದುಕುಳಿಯುವಿಕೆ ಮತ್ತು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ವಿಶ್ವ ಕ್ಯಾನ್ಸರ್ ದಿನವು ಕ್ಯಾನ್ಸರ್ ಸುತ್ತಲಿನ ಪುರಾಣಗಳು, ಭಯ ಮತ್ತು ಕಳಂಕವನ್ನು ಸಹ ಪರಿಹರಿಸುತ್ತದೆ ಈ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದರಿಂದ ರೋಗದ ಸುತ್ತಲಿನ ಕಳಂಕವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಒಟ್ಟಾಗಿ, ನಾವು ಅನೇಕ ಜೀವನಗಳಲ್ಲಿ ಬದಲಾವಣೆಯನ್ನು ತರಬಹುದು ಎಂದು ತಿಳಿಸಿದರು.

*ಅಭಿನಂದನಾ ಸನ್ಮಾನ* ಇದೆ ವಾರದ ಸಭೆಯಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಡಾ. ಶ್ವೇತಾ ಮತ್ತು ಮುರುಳಿ ದಂಪತಿಗಳ ಪುತ್ರ 10 ವರ್ಷದ ಚಿ!! ತ್ರಿಭುವನ್ ಸಾಂಗತ್ಯಗೌಡ ರವರು ಯೋಗಾಸನದ ಮೂಲಕ ಸ್ಥಾಪಿಸಿರುವ ಗಿನ್ನಿಸ್ ರೆಕಾರ್ಡ್ ಹಾಗೂ ಹಲವಾರು ಸಾಧನೆಗಳನ್ನು ಗುರುತಿಸಿ ಮತ್ತು ಇವರ ಪುತ್ರಿ ಕು. ಕನಸು ರವರ ಅನೇಕ ಕ್ರೀಡಾ ಹಾಗೂ ನೃತ್ಯ ಕ್ಷೇತ್ರದಲ್ಲಿನ ಸಾಧನೆ ಯನ್ನು ಗುರುತಿಸಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮ ದಲ್ಲಿ ರೋಟರಿ ಕ್ಲಬ್ ಆಫ್ ಸನ್ ರೈಸ್ ನ ಅಧ್ಯಕ್ಷರು ರೋ!! ವಜ್ರಕುಮಾರ್ H D, ಕಾರ್ಯದರ್ಶಿಗಳಾ ದ ರೋ!! K S ಯೋಗೇಶ್, ಖಜಾಂಚಿ ರೋ!! ಗವಿಗೌಡ ಕ್ಲಬ್ ನ ನಿರ್ದೇಶಕರು ಗಳಾದ ರೋ!! ಅಮೃತ್ ಕುಮಾರ್, ರೋ!! ಭುವನೇಶ್, ರೋ!! ಸಿದ್ದನಂಜಪ್ಪ, ರೋ!! ಗುರು ಮೂರ್ತಿ, ರೋ!! ಬೂದೇಶ್ಜಂಟಿ ಕಾರ್ಯದರ್ಶಿ ರೋ!! ಶಶಿಂದ್ರನಾಥಾನ್ M D ಸದಸ್ಯರು ಗಳಾದ ರೋ!! ರಾಜೇಶ್, ರೋ!! ದರ್ಶನ್. ರೋ!! ಕೃಷ್ಣ ಮೂರ್ತಿ, ರೋ!! ಕರುಣೇಶ್, ರೋ ಮಧು ಹಾಗೂ ಇತರರು ಉಪಸ್ಥಿತರಿದ್ದರು. ಕ್ಲಬ್ ನ ಹಿರಿಯ ಸದಸ್ಯರು ಮತ್ತು ಸಮಾಜ ಸೇವಕರು ರೋ!! M C ರಾಜಣ್ಣ ರವರು ಸಭೆಯ ಆಥಿತ್ಯ ವಹಿಸಿದ್ದರು.

ಇಂತಿ,ಅಧ್ಯಕ್ಷರುಕಾರ್ಯದರ್ಶಿಗಳುಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *