
ಸಕಲೇಶಪುರ – ಬಾಗಲಕೋಟೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೇಲೆ ಕಲ್ಲಿನ ದಾಳಿ ಹಿಂದೆ ಪ್ರಬಲ ಇಸ್ಲಾಮಿಕ್ ಮತಾಂಧ ಶಕ್ತಿಯಾ ಹುನ್ನಾರವಿದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಗಂಭೀರ ಆರೋಪ ಮಾಡಿದರು.
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ನಡೆಯುತಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ಚಪ್ಪಲಿ ಎಸೆದ ಧಾರುಣ ಘಟನೆ ನಡೆದಿದೆ. ಶಿವಾಜಿ ಜಯಂತಿ ಮಸೀದಿ ಬಳಿ ಬಂದಾಗ ಏಕಾಏಕಿ ಕಲ್ಲು ತೂರಾಟ ಮಾಡಿದರಿಂದ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅನೇಕರ ತಲೆಗೆ ಏಟು ಬಿದಿದ್ದು ಕಾನೂನು ರಕ್ಷಣೆ ಮಾಡುವಂಥ ಉನ್ನತ ಅಧಿಕಾರಿಗಳ ಮೇಲೆ ದಾಳಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಈ ರೀತಿ ಕಲ್ಲುತೂರಾಟ ಘಟನೆಗಳು ಹೆಚ್ಚಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಹಿಂದೂ ದಲಿತ ಮಹಿಳೆ ಮನೆ ಮೇಲೆ ನಿರಂತರ ಕಲ್ಲು ತೂರಾಟ ಮಾಡಿ ಮನೆಯಲ್ಲಿ ಇದ್ದ ಮಹಿಳೆ ಮತ್ತು ಯುವತಿಯನ್ನು ಗುರಿಯಾಗಿಸಿಕೊಂಡು ಭಯ ಪಡಿಸುವ ರೀತಿಯಲ್ಲಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.
ರಾಜ್ಯದ ಬೇರೆ ಬೇರೆ ಕಡೆ ಹಿಂದೂ ಮೆರವಣಿಗೆ, ಹಿಂದೂ ದೇವಸ್ಥಾನಗಳು, ಗಣಪತಿ ಮೆರವಣಿಗೆ, ಓಂಶಕ್ತಿ ಮೆರವಣಿಗೆ ಮೇಲೆ ಕಲ್ಲುತೂರಾಟ ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿ ಹಾಗೂ ಹಿಂದುಗಳನ್ನು ಗುರಿಯಾಗಿಸಿ ಕೋಮುಗಲಭೆ ಸೃಷ್ಟಿಸಿ ಶಾಂತಿ ಕದಡಲು ಯತ್ನಿಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆ ಸಕಲೇಶಪುರ ನಗರ ಠಾಣೆ ಇನ್ಸ್ಪೆಕ್ಟರ್ ಮುಖೇನ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದೆ.
ಈ ಸಂಧರ್ಭದಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ ಸೇರಿದಂತೆ ಶಿವು ಜಿಪ್ಪಿ. ಶೇಖರ್ ಸಿದ್ದಾಪುರ. ಸುಪ್ರಿತ್ ಉಪಸ್ಥಿತಿ ಇದ್ದರು
