ಸಕಲೇಶಪುರ : ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿರುವ ವೀರಾಶ್ ಹೋಂ ಸ್ಟೇ ನಲ್ಲಿ ಬೆಂಗಳೂರು ಮೂಲದ ಉದ್ಯಮಿ ಚಂದ್ರು ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ತನ್ನ ಹುಟ್ಟು ಹಬ್ಬದ ಅಂಗವಾಗಿ ಉದ್ಯಮಿ ಚಂದ್ರುರವರು ತಾಲೂಕಿನ ಹಾರ್ಲೆ ಗಣಪ್ಪಯ್ಯ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮಕ್ಕಳಿಗೆ 10 ಸೈಕಲ್ ಹಾಗೂ ಕೌಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 10 ಸೈಕಲ್ ಒಟ್ಟು 20 ಸೈಕಲ್ ಗಳನ್ನು ಕೊಡುಗೆಯಾಗಿ ನೀಡಿದರು.

ಗುಣಮಟ್ಟದ ಸೈಕಲ್ ಅಲ್ಲದೆ ಎರಡು ಶಾಲೆಗಳಿಗೆ ಉತ್ತಮ ಗುಣಮಟ್ಟದ ಕ್ರಿಕೆಟ್ ಸೆಟ್, ವಾಲಿಬಾಲ್ ಸೆಟ್, ಕೇರಂ ಬೋರ್ಡ್ ಗಳನ್ನು ಸಹ ಅವರು ನೀಡಿದರು. .

ಶಾಸಕ ಸಿಮೆಂಟ್ ಮಂಜು ಉದ್ಯಮಿ ಚಂದ್ರುರವರು ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರಿಗೆ ಆ ಭಗವಂತ ಮತ್ತಷ್ಟು ದಾನ ಮಾಡುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಚಂದ್ರು ಬಿಜೆಪಿ ಮುಖಂಡರಾದ ಶರತ್,ಬನ್ನಹಳ್ಳಿ ಪುನೀತ್, ನಿರಂಜನ್ ಮತ್ತಿತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *