ಆಲೂರು:ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರು ಕೊಡಮಾಡುವ 2026 ನೇ ಸಾಲಿನ ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ರಾಷ್ಟ್ರಿಯ ಪ್ರಶಸ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಎಸ್.ಎಂ.ರಘುಪಾಳ್ಯ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವಿ.ವಿ.ಹಿರೇಮಠ ತಿಳಿಸಿದ್ದಾರೆ.

ರಘುಪಾಳ್ಯ ಅವರು ಜಿಲ್ಲಾ ಕರವೇ ಕಾರ್ಯದರ್ಶಿಗಳಾಗಿ ಹಲವು ವರ್ಷಗಳಿಂದ ಕನ್ನಡ ನಾಡು ನುಡಿಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಜೊತೆಗೆ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ರಕ್ತದಾನ ಶಿಬಿರ, ಆರೋಗ್ಯ ಶಿಬಿರ,ನೇತ್ರ ತಪಾಸಣೆ,ಯೋಗ ಶಿಬಿರಗಳನ್ನು ನಡೆಸುತ್ತಿದ್ದಾರೆ.ಸರಕಾರಿ ಶಾಲೆಗಳ ಬಲವರ್ಧನೆಗಾಗಿ ಹಲವು ಶಾಲಾ ಮಕ್ಕಳಿಗೆ ಸಮವಸ್ತ್ರ, ಲೇಖನ ಸಾಮಗ್ರಿ,ಆಟೋಪಕರಣ,ಪೀಠೋಪಕರಣಗಳನ್ನು ನೀಡುತ್ತಾ ಬಂದಿದ್ದಾರೆ.

ಇವರ ಸಮಾಜ ಸೇವಾ ಕ್ಷೇತ್ರದ ಕಾರ್ಯವನ್ನು ಗುರುತಿಸಿ ಗದಗ ಜಿಲ್ಲಾ ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಬರುವ ಮಾರ್ಚ್ 3 ರಂದು ಗದಗ ನಗರದಲ್ಲಿ ನಡೆಯುವ ಪಂಡಿತ ಪುಟ್ಟರಾಜ ಗವಾಯಿಗಳವರ 112 ನೇ ಜಯಂತೋತ್ಸವ ಸಮಾರಂಭದಲ್ಲಿ *ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ* ನೀಡಲಾಗುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *