ಬೇಲೂರು : ನಲ್ಕೆ ಗ್ರಾಮದ ದಿವಂಗತ ಶ್ರೀ ಸಣ್ಣಯ್ಯ ಮತ್ತು ಗೌರಮ್ಮನವರ ಪ್ರಥಮ ಪುತ್ರನಾಗಿ ಜನಿಸಿದ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಕ್ತಾನ ಶಾಸ್ತ್ರ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಯೋಗ ಶಿಕ್ಷಣದಲ್ಲಿ ಪದವಿಯನ್ನು ಪಡೆದು, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ತರಬೇತುದಾರರಾಗಿ ಆಯ್ಕೆಯಾಗುತ್ತಾರೆ.

ಇವರು ಸೇವಾ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯುತ್ತಮ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು, “ಯೋಗ ಸಂಜೀವಿನಿ” “ಯೋಗ ಚೇತನ” ಎಂದು ಎರಡು ಪುಸ್ತಕಗಳನ್ನು ಹೊರ ತಂದವರಲ್ಲದೆ ಚಿಕ್ಕಮಗಳೂರಿನ ಡಿಸಿ, ಎಸಿ ಹಾಗೂ ಅವರ ಸಿಬ್ಬಂದಿಗಳಿಗೆ ಯೋಗ ತರಬೇತಿ ನೀಡಿರುತ್ತಾರೆ.ಅಲ್ಲದೇ ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿಗೆ, ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಗೂ ಚಿಕ್ಕಮಗಳೂರಿನ ಬಾಲ ಭವನ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಶೃಂಗೇರಿ, ಅಜ್ಜಂಪುರ, ತರೀಕೆರೆ, ಮೂಡಿಗೆರೆ ತಾಲೂಕುಗಳಲ್ಲಿ ಹಿರಿಯ ನಾಗರಿಕರಿಗೆ ಯೋಗ ತರಬೇತಿ ನೀಡಿದವರು.

ಇವರ ಸೇವೆಯನ್ನು ಗುರುತಿಸಿ ಆಯುಷ್ ಇಲಾಖೆ ಚಿಕ್ಕಮಗಳೂರು ವತಿಯಿಂದ ಬೆಟ್ಟದ ಮನೆ ಸರ್ಕಾರಿ ಆಯುಷ್ ಹಾಸ್ಪಿಟಲ್ ಗೆ ಯೋಗ ತರಬೇತಿದಾರರಾಗಿ ನೇಮಕಗೊಂಡಿರುತ್ತಾರೆ. ಆದರೇ ದಲಿತ ಚಳವಳಿಗಾರರ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ ಹುದ್ದೆಯನ್ನು ತಿರಸ್ಕರಿಸಿ,, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮಾನ್ಯತೆ ಕೇಂದ್ರವಾದ ಡಾ.ಹಾಮಾನ ಸಂಶೋಧನೆ ಕೇಂದ್ರ ಉಜಿರೆ, ಸಂಶೋಧನಾ ಕೇಂದ್ರದ ಚರಿತ್ರೆ ವಿಭಾಗದಲ್ಲಿ ಪ್ರೋ.ಸುರೇಶ್ ರೈ ಕೆ ರವರ ಮಾರ್ಗದರ್ಶನದಲ್ಲಿ “ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳುವಳಿ ಸಮಕಾಲೀನ ಅಧ್ಯಯನ” ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಜಿಲ್ಲೆಯ ನೂರಾರು ದಲಿತ ಪ್ರಗತಿಪರ ಹೋರಾಟಗಾರರನ್ನು ಚರಿತ್ರೆಯ ಪುಟಗಳಲ್ಲಿ ದಾಖಲು ಮಾಡಿ ಮಹಾಪ್ರಬಂಧವನ್ನು ನಿರರ್ಗಳವಾಗಿ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

ಇವರು ಅನೇಕ ದಲಿತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಸಕ್ರಿಯರಾಗಿದ್ದಾರೆ ಅಲ್ಲದೆ ಉತ್ತಮ ನಿರೂಪಕರು, ಗಾಯಕರು, ಲೇಖಕರು, ಆಪ್ತಸಮಲೋಚಕರಾದ ಇವರು “ಯೋಗ ಚೇತನ” “ಯೋಗ ಸಂಜೀವಿನಿ” “ಮೂಡಿಗೆರೆ ತಾಲ್ಲೂಕಿನ ದಲಿತ ಸಂಸ್ಕೃತಿ ಒಂದು ಅಧ್ಯಯನ” ಎಂಬ ಪುಸ್ತಕಗಳನ್ನು ಬರೆದಿದ್ದರಲ್ಲದೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

ಪ್ರಸ್ತುತ ದಲಿತ ಚಳುವಳಿಯಲ್ಲಿ ಸಕ್ರಿಯರಾಗಿದ್ದಾರೆ. ಮಾತ್ರವಲ್ಲದೆ, ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶಕರಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರಗಳನ್ನು ರೂಪಿಸುತ್ತಿದ್ದಾರೆ ಮಾತ್ರವಲ್ಲದೆ, ಯುವ ಸಮುದಾಯವನ್ನು ವೈಚಾರಿಕವಾಗಿ ಸಂಘಟಿಸಿ ಜನಪರ ಹೋರಾಟಗಳನ್ನು ರೂಪಿಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.ಜನಪರ ಚಿಂತಕರಾಗಿರುವ ಹರೀಶ್ ನಲ್ಕೆ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಿಂದ ಡಾಕ್ಟರೇಟ್ ಪದವಿ ದೊರೆತಿದೆ…

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *