
ಸಕಲೇಶಪುರ : ತಾಲೂಕು ಯಸಳೂರು ಹೋಬಳಿ, ಗೋಪಾಲಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗೋಪಾಲಕೃಷ್ಣ ನೂತನ ದೇವಾಲಯಕ್ಕೆ ಗುರುವಾರ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರು ಆಗಮಿಸಿ ನೂತನವಾಗಿ ಪ್ರಾರಂಭಗೊಂಡಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿನಿತ್ಯ ಈ ಭಾಗದಲ್ಲಿ ಆನೆ ಮತ್ತು ಮಾನವ ಸಂಘರ್ಷದಲ್ಲಿ ಹಲವಾರು ಕುಟುಂಬಗಳಲ್ಲಿ ಸಾವು ನೋವು ಆಗುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇನೆ ನಾನು 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ಹಣವನ್ನು ಆನೆ ತಡೆಯಲು ರೈಲ್ವೆ ಬ್ಯಾರಕೇಡ್ ಹಾಕಲು ಕೊಟ್ಟಿದ್ದೆವು ಆ ನಂತರದ ಸರ್ಕಾರ ಗಮನ ಕೊಡದ ಕಾರಣ ಈ ರೀತಿ ಸಮಸ್ಯೆ ಆಗುತ್ತಿದೆ ಮೊನ್ನೆ ಸಹ ವಾರದಿಂದಷ್ಟೇ ಆನೆಯಿಂದ ಸಾವಾಗಿರುವುದನ್ನು ಗಮನಿಸಿದ್ದೇನೆ ಕೇಂದ್ರದ ಅರಣ್ಯ ಸಚಿವರ ಹತ್ತಿರ ಚರ್ಚೆ ಮಾಡಿದ್ದೇನೆ, 2021 ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ರಿಪೋರ್ಟ್ ಕೊಟ್ಟಿದ್ದು ಆ ರಿಪೋರ್ಟನ್ನು ತರಿಸಿಕೊಂಡಿದ್ದೇನೆ ಅದನ್ನು ಸ್ಟಡಿ ಮಾಡುತ್ತಿದ್ದೇನೆ.
ನಿಮಗೆ ಪರ್ಮನೆಂಟ್ ಆಗಿ ಆನೆಯಿಂದ ಮುಕ್ತಿ ದೊರೆಯಬೇಕು ನೆಮ್ಮದಿಯಿಂದ ಬದುಕಬೇಕು ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇಲ್ಲಿ ಮುಳುಗಡೆ ಪ್ರದೇಶ ಏನು ಇದೆ ಹಿಂದೆ ಮುಳುಗಡೆ ಪ್ರದೇಶದ ಪರಿಹಾರ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ
ನಿಮ್ಮ ಗಮನಕ್ಕೆ ತರುತ್ತೇನೆ ಭವಿಷ್ಯ ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರವನ್ನು ರಚನೆ ಮಾಡುತ್ತಿದ್ದು, ನನಗೆ ವಿಶ್ವಾಸ ಇದೆ ಆ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮುಳುಗಡೆಯಾಗಿರುವ ಕುಟುಂಬಗಳಿಗೆ ಪರಿಹಾರ ದೊರಕಿಸಲು ನಾನು ಮಾತು ಕೊಡುತ್ತೇನೆ ಅದೆಲ್ಲವನ್ನು ಸರಿಪಡಿಸಿ ಕೊಡುವ ಕೆಲಸ ಮಾಡುತ್ತೇನೆ ಅದು ನನ್ನ ಜವಾಬ್ದಾರಿ ಅದರ ಜೊತೆಗೆ ಮೊನ್ನೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ನಡೆದ ಕಾಫಿ ಬೆಳಗಾರರ ಸಂಶೋಧನಾ ಕೇಂದ್ರದ ಕಾರ್ಯಕ್ರಮಕ್ಕೆ ಬಂದಿದ್ದೆ ಅಲ್ಲಿ ಕಾಫಿ ಬೆಳೆಗಾರರಿಗೆ ಆರ್ಥಿಕ ಇಲಾಖೆಯಿಂದ ಬ್ಯಾಂಕುಗಳಿಂದ ಸರ್ಫೇಸಿ ಕಾಯ್ದೆಯಿಂದ ರೈತರಿಗೆ ಗೊತ್ತಿಲ್ಲದಂತೆಯೇ ಬ್ಯಾಂಕುಗಳು ರೈತರ ಜಮೀನನ್ನು ಹರಾಜು ಹಾಕುತ್ತಾರೆ, ಆ ಆಕ್ಟನ್ನು ಕೇಂದ್ರದಲ್ಲಿ ಚರ್ಚಿಸಿ ರದ್ದು ಮಾಡಲು ಕೇಂದ್ರದಲ್ಲಿ ತೀರ್ಮಾನ ಮಾಡಿದ್ದೇವೆ, ನೀವುಗಳೆಲ್ಲ ರಿಮೋಟ್ ಏರಿಯಾದಲ್ಲಿ ಬದುಕುತ್ತಿದ್ದೀರಿ ಹೊರನೋಟಕ್ಕೆ ನೀವು ಕಾಫಿ ಬೆಳೆಗಾರರಂತೆ ಕಂಡರೂ ಸಹ ನಿಮ್ಮ ಪರಿಸ್ಥಿತಿ ಏನು ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ ಕೇಂದ್ರ ಸರ್ಕಾರದಿಂದ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಮಟ್ಟದಲ್ಲಿಯೇ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಹಲವಾರು ರೀತಿಯ ಚಿಂತನೆಗಳನ್ನು ಇಟ್ಟುಕೊಂಡಿದ್ದೇನೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಮ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಕೆ.ಆರ್.ನಗರ ಮಾಜಿಶಾಸಕರಾದ ಸಾರಾ ಮಹೇಶ್, ಶ್ರೀ ಚನ್ನಸಿದ್ದ ಶಿವಾಚಾರ್ಯ ಸ್ವಾಮಿಗಳು ತೆಂಕಲಗೂಡು ಮಠ, ಯಸಳೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಚಂಚಲಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.
