
ಸಕಲೇಶಪುರ : ಪಟ್ಟಣದ ಹಳೆ ಬಸ್ ನಿಲ್ದಾಣದ ಪುರಸಭೆ ಕಾಂಪ್ಲೆಕ್ಸ್ ಆವರಣಕ್ಕೆ ದಿಡೀರ್ ಭೇಟಿ ನೀಡಿದ ಶಾಸಕರಾದ ಸಿಮೆಂಟ್ ಮಂಜುನಾಥ್ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪುರಸಭೆಯ ವ್ಯಾಪ್ತಿಗೆ ಒಳಪಡುವ ಶೌಚಾಲಯದಲ್ಲಿ ಕಸದ ರಾಶಿ, ಗಲೀಜು ಮತ್ತು ಸಾರ್ವಜನಿಕ ಶೌಚಾಲಯವನ್ನು ಅವ್ಯವಸ್ಥೆಯನ್ನು ಕಂಡು ಪುರಸಭೆಯ ಕಾರ್ಯ ನಿರ್ವಹಣಾಧಿಕಾರಿ ಡಾ. ಜಯಣ್ಣ ಅವರನ್ನು ಸ್ಥಳಕ್ಕೆ ಕರೆಸಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು ಹಾಗೂ ಕಸದ ರಾಶಿ ತೆರವುಗೊಳಿಸುವಂತೆ ಸೂಚಿಸಿದರು.






