
ಸಕಲೇಶಪುರ : ಗಿಡ ನೆಡುವ ಮೂಲಕ ಬಾಗೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್.ಇಂದು ಬಾಗೆ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿದ ಅವರು ಪಂಚಾಯತಿ ಆವರಣದಲ್ಲಿ ಸಸಿಯನ್ನು ನೆಟ್ಟು ಸಾಮಾನ್ಯ ಸಭೆಯಲ್ಲಿ ಭಾಗಿಯಾದರುನಂತರ ಮಾತನಾಡಿ ಅವರು ಉದಾಸೀನ ಮತ್ತು ಕಾರ್ಯ ವಿಳಂಬ ಮಾಡದೆ ಪಂಚಾಯತಿಗೆ ಬರುವವರ ಕೆಲಸಗಳನ್ನು ಸಾಧ್ಯವಾದಷ್ಟು ಬೇಗ ಮಾಡಿಕೊಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆ ಸವಲತ್ತುಗಳನ್ನು ದೊರಕಿಸಿ ಕೊಡಬೇಕೆಂದು ಸೂಚಿಸಿದರು ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಜೈ ಶಂಕರ್ ಉಪಾಧ್ಯಕ್ಷ ಸವಿತಾ ವನಜಾಕ್ಷಿ, ಪುಷ್ಪ,ರೇಖಾ, ಶ್ರೀನಿವಾಸ್, ಮೋಹಿನಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಇತರ ಮುಖಂಡರು ಇದ್ದರು.




