ಹಾಸನ : ದಿನಾಂಕ : 04-04.2026 ಶನಿವಾರದಂದು ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಈ ಸಾಧನಗಳನ್ನು ಹಾಸನ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ ರವರು ಉದ್ಘಾಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡುತ್ತಾ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ರವರ ಕಾರ್ಯಕ್ಕೆ ಹರ್ಷ ವ್ಯಕ್ತ ಪಡಿಸಿದರು. ಮತ್ತು ಈ ಮೂಲಕ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕಾರಾಗೃಹ ನಿವಾಸಿಗಳು ಆಲಿಸಿ, ಮನ ಪರಿವರ್ತನೆ ಮಾಡಿಕೊಂಡು ಸ್ವಸ್ಥ ಸಮಾಜದಲ್ಲಿ ಭಾಗಿಯಾಗಬೇಕು ಹಾಗೂ ಸಮಯ ವ್ಯರ್ಥ ಮಾಡದೆ ಆಕಾಶವಾಣಿ ಯಲ್ಲಿ ಬಿತ್ತರವಾಗುವ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಆಲಿಸಿ ಬಿಡುಗಡೆಯ ನಂತರ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯದ ಪ್ರಯೋಜನ ಪಡೆದು ಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯ ಕ್ರಮವನ್ನು ಜಿಲ್ಲಾ ಕಾರಾಗೃಹ ಮತ್ತು ಹಾಸನ ಆಕಾಶವಾಣಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಜೋನ್ 9 ರ AG ಜೆ ಏನ್ ಮಂಜುನಾಥ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷರು ರೋ!! ವಜ್ರಕುಮಾರ್ H D , ಕಾರ್ಯದರ್ಶಿ ರೋ!! ಯೋಗೇಶ್ K S, ಹಾಸನ ಆಕಾಶವಾಣಿಯ ಕಾರ್ಯನಿರ್ವಹಕರಾದ ಅರಕಲಗೂಡು ವಿ ಮಧುಸೂದನ್, ಕಾರ್ಯಕ್ರಮ ಮುಖ್ಯಸ್ಥರಾದ ಸುಜಾತ ಈ ತಳವಾರ್, ಪತ್ರಕರ್ತರಾದ ಉದಯಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ನಿರ್ದೇಶಕರು ರೋ!! ಭುವನೇಶ್, ರೋ ಸಿದ್ದ ನಂಜಪ್ಪ, ರೋ!!ರಾಜೇಶ್ ರವರು ಭಾಗವಹಿಸಿದ್ದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಪ್ರಸನ್ನ ಆರ್, ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಕಾರಾಗೃಹದ ಎಲ್ಲಾ ಸಿಬ್ಬಂದಿಗಳು ಮತ್ತು 250ಕ್ಕೂ ಹೆಚ್ಚು ಕಾರಾಗೃಹ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.*ಟೀಮ್ ಸನ್ ರೈಸ್*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *