ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ ಬಾಬು ಜಗಜೀವನ ರಾಮ್ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರು, ಸಮಾಜ ಸುಧಾರಕ ಮತ್ತು ಶೋಷಿತ ಸಮುದಾಯದ ನಾಯಕ. ‘ಬಾಬೂಜಿ’ ಎಂದೇ ಜನಪ್ರಿಯರಾಗಿದ್ದ ಇವರು, ಭಾರತದ ಮೊದಲ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ, ನಂತರ ರಕ್ಷಣಾ ಸಚಿವರಾಗಿ 1971ರ ಯುದ್ಧದ ಸಮಯದಲ್ಲಿ ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಹಸಿರು ಕ್ರಾಂತಿಯ ಹರಿಕಾರರಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ಬಾಬು ಜಗಜೀವನ್ ರಾಮ್ ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬ್ಯಾಕರವಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶತೇಂದ್ರ ಕುಮಾರ್ ಮಾತನಾಡಿ ಬಾಬು ಜಗಜೀವನರಾಂ ಏಪ್ರಿಲ್ 5, 1908 ರಂದು ಬಿಹಾರದ ಭೋಜ್‌ಪುರದಲ್ಲಿ ಜನಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು.ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಾಬು ಜಗಜೀವನ್ ರಾಮ್ 1935ರಲ್ಲಿ ‘ಅಖಿಲ ಭಾರತ ಡಿಪ್ರೆಸ್ಡ್ ಕ್ಲಾಸಸ್ ಲೀಗ್’ ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಂತರರಾಜಕೀಯ ಜೀವನ ಜೀವನವನ್ನು ಆರಂಭಿಸಿದ ಅವರು1946ರಲ್ಲಿ ಜವಾಹರಲಾಲ್ ನೆಹರು ಅವರ ಮಧ್ಯಂತರ ಸರ್ಕಾರದಲ್ಲಿ ಸಚಿವರಾದರು.ಸುಮಾರು 31 ವರ್ಷಗಳ ಕಾಲ ಕೇಂದ್ರ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ ಅವರು.1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿಯೂ ಕೂಡ ಸೇವೆ ಸಲ್ಲಿಸಿದ ರು.1977 ರಿಂದ 1979ರ ಅವಧಿಯಲ್ಲಿ ಭಾರತದ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು.

ಸಾಮಾಜಿಕ ಹಕ್ಕುಗಳಿಗಾಗಿ ದಲಿತರು, ಹಿಂದುಳಿದವರು ಮತ್ತು ಗ್ರಾಮೀಣ ಕಾರ್ಮಿಕರ ಪರವಾಗಿ ಹೋರಾಡಿದರು. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು. ಬಾಬು ಜಗಜೀವನ ರಾಮ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 5 ರಂದು ಅವರ ಜನ್ಮದಿನವನ್ನು ‘ಸಮತಾ ದಿವಸ್’ (ಸಮಾನತೆಯ ದಿನ) ಎಂದು ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಉಪ ನಿರ್ದೇಶಕರಾದ ಮೋಹನ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿರಸ್ತೆದಾರರಾದ ರವಿಕುಮಾರ್, ಜನಾರ್ಧನ್, ಆದಿ ದ್ರಾವಿಡ ಯುವಕರ ಅಭಿವೃದ್ಧಿ ಸಂಘದ ಮುಖಂಡರಾದ ನಂಜಯ್ಯ, ಮುಖಂಡರುಗಳಾದ ಬ್ಯಾಗಡಹಳ್ಳಿ ರಾಮಚಂದ್ರರಾವ್, ಬೆಳಗೋಡು ಬಸವರಾಜ್, ವಳಲಹಳ್ಳಿ ವೀರೇಶ್, ಲಕ್ಷ್ಮಣ್ ಕೀರ್ತಿ ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಿ ರಂಗನಾಥ್, ಕರವೇ ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷೆ ಕೌಸಲ್ಯ ಲಕ್ಷ್ಮಣ್ ಗೌಡ, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *