
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯ ಕರಡಿಗಾಲ ಗ್ರಾಮದಲ್ಲಿ ಶ್ರೀ ದೇವಿರಮ್ಮ ಹಾಗೂ ಕನ್ನಂಬಾಡಿಯಮ್ಮನವರ ಸುಗ್ಗಿ ಮಹೋತ್ಸವವು ಏಪ್ರಿಲ್ 7ರಿಂದ 11ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ನಡೆಯಲಿದೆ.
ಏಪ್ರಿಲ್ 7ರಂದು ಮಂಗಳವಾರ ಹೊನ್ನಾರು ಮತ್ತು ಮಲ್ಲು ಸುಗ್ಗಿ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 8ರಂದು ಬುಧವಾರ ದೊಡ್ಡ ಸುಗ್ಗಿ ಆಚರಣೆ ಜರುಗಲಿದೆ. ಏಪ್ರಿಲ್ 9ರಂದು ಗುರುವಾರ ಬೆಳಿಗ್ಗೆ ಬಿಲ್ಲು ಸುಗ್ಗಿ, ಮಡೆ ಹಾಗೂ ಹಗಲು ಸುಗ್ಗಿ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 10ರಂದು ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಶ್ರೀ ಮಹಾಲಕ್ಷ್ಮೀ ದೇವಿಗೆ ಹಣ್ಣು-ಕಾಯಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಆಶೀರ್ವಾದ ಪಡೆಯುವಂತೆ ಗ್ರಾಮಸ್ಥರು ವಿನಂತಿಸಿದ್ದಾರೆ.
ಇನ್ನು ಏಪ್ರಿಲ್ 11ರಂದು ಶನಿವಾರ ಮಧ್ಯಾಹ್ನ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಹಾಗೂ ಸಂಜೆ 6 ಗಂಟೆಯಿಂದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಮಹೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಿ ಕರಡಿಗಾಲ ಗ್ರಾಮಸ್ಥರು ಆಹ್ವಾನ ನೀಡಿದ್ದಾರೆ.ಹೆಚ್ಚಿನ ಮಾಹಿತಿಗೆ ಸಂಪರ್ಕ: 9902443990.
