
ಸಕಲೇಶಪುರ : ಪುರಸಭಾ ವ್ಯಾಪ್ತಿಯ ಆಸ್ತಿ ತೆರಿಗೆದಾರರು ಏಪ್ರಿಲ್ 30ರ 2026ರ ಒಳಗೆ ಪಾವತಿ ಮಾಡುವ ಮೂಲಕ ಶೇ5% ವಿನಾಯಿತಿ ಇರುತ್ತದೆ ಸಾರ್ವಜನಿಕರು ಈ ವಿನಾಯಿತಿಯನ್ನು ಸದುಪಯೋಗ ಪಡೆದು ಆಸ್ತಿ ತೆರಿಗೆ ಪಾವತಿಸಬೇಕೆಂದು ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಕಲೇಶಪುರ ಪಟ್ಟಣದ ಆಸ್ತಿ ತೆರಿಗೆದಾರರು 2025 -26ನೇ ಸಾಲಿನವರೆಗೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ದಂಡ ಸಮೇತ ಮಾರ್ಚ್ 31.2026 ರ ವರೆಗೆ ಪಾವತಿ ಮಾಡತಕ್ಕದ್ದು ಹಾಗೂ ಸರ್ಕಾರದ ಸುತ್ತೋಲೆಯನ್ವಯ 2026-27ನೇ ಸಾಲಿಗೆ ಆಸ್ತಿ ತೆರಿಗೆಯಲ್ಲಿ ಶೇಕಡ ಮೂರರಷ್ಟು ಹೆಚ್ಚುವರಿಯಾಗಿರುತ್ತದೆ ಅದರಂತೆ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30 2026ರ ಒಳಗೆ ಆಸ್ತಿಯ ಮೂಲ ತೆರಿಗೆ ಮೊತ್ತಕ್ಕೆ ಶೇ 5 ರಷ್ಟು ವಿನಾಯಿತಿ ಇದ್ದು ಸಾರ್ವಜನಿಕರು ಈ ವಿನಾಯತಿಯನ್ನು ಸದುಪಯೋಗ ಪಡೆದುಕೊಂಡು ಪಾವತಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಮೇ1ರಿಂದ ಜೂನ್ 30 ರ ಒಳಗೆ ಪಾವತಿಸಿದ್ದಲ್ಲಿ ದಂಡ ವಿನಾಯತಿ ಇರುತ್ತದೆ ಹಾಗೂ 2026- 27 ನೇ ಸಾಲಿನ ಆಸ್ತಿ ತೆರಿಗೆಯನ್ನು 2026 ಜುಲೈ ಒಂದರಿಂದ ಆಸ್ತಿಯ ಮೂಲ ತೆರಿಗೆಯ ಮೊತ್ತದ ಮೇಲೆ ಮಾಹೆ ಶೇ. 2 ರಷ್ಟು ದಂಡ ಸೇರಿಸಿ ಪಾವತಿ ಮಾಡಬೇಕಾಗಿರುತ್ತದೆ.
ಆಸ್ತಿಯ ಮಾಲೀಕರು ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಪಾವತಿಸಿ ರಿಯಾಯಿತಿ ಸೌಲಭ್ಯವನ್ನು ಪಡೆದು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿ ಮೂಲ ದಾಖಲಾತಿಗಳನ್ನು ಒದಗಿಸಿ e-ಆಸ್ತಿಯನ್ನು ನೋಂದಣಿ ಮಾಡಿಕೊಳ್ಳತಕ್ಕದ್ದು ಎಂದು ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
