ಸಕಲೇಶಪುರ : ರಾಜ್ಯಾದ್ಯಂತ ನಡೆಯುತ್ತಿರುವ ಭಯೋತ್ಪಾದನೆ, ಲವ್ ಜಿಹಾದ್ ಹಾಗೂ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ದ ವಿರುದ್ಧ ವಿ ಎಚ್ ಪಿ ಹಾಗೂ ಬಜರಂಗದಳ ವತಿಯಿಂದ ಪ್ರತಿಭಟನೆ ಮತ್ತು ಉನ್ನತ ಮಟ್ಟದ ತನಿಖೆ ಹಾಗೂ ಕಠಿಣ ಕ್ರಮಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.

ತಾಲೂಕಿನ ಹಳೆ ಬಸ್ ಸ್ಟಾಂಡ್ ನಿಲ್ದಾಣದಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೂ ಪ್ರತಿಭಟನ ಮೆರವಣಿಗೆಯಲ್ಲಿ ತಲುಪಿ ಎಸಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮನವಿ ಪತ್ರದ ವಿವರ: ಜಿಹಾದ್ ಮತ್ತು ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ಹಬ್ಬಿದೆ. ಜಿಹಾದ್ ಸಿದ್ಧಾಂತದ ಮೂಲಕ ಮಹಾರಾಷ್ಟ್ರದ ನಾಸಿಕ್ ನಲ್ಲಿ ವರದಿಯಾದ ಕಾರ್ಪೊರೇಟ್ ಜಿಹಾದ್ ಹಾಗೂ ನಮ್ಮ ರಾಜ್ಯದ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ ಜಿಮ್ ಸೆಕ್ಸ್ ಕ್ಯಾಂಡಲ್ ಪ್ರಕರಣಗಳು ಸಾಕಿಯಾಗಿದೆ. ಜಿಹಾದ್ ಹಾಗೂ ಭಯೋತ್ಪಾದನೆ ವಿದೇಶಿ ಹಣಕಾಸಿನ ಮೂಲದಿಂದ ನಡೆಯುತ್ತಿದೆ. ಲವ್ ಜಿಹಾದ್ಗೆ ಹಿಂದೂ ಹೆಣ್ಣುಮಕ್ಕಳುಗಳನ್ನು ಗುರಿಯಾಗಿಸಿಕೊಂಡು, ಹರೆ ನಗ್ನ ವಿಡಿಯೋಗಳ ಚಿತ್ತೀಕರಿಸಿ, ಬ್ಲಾಕ್ ಮೇಲ್ ಮಾಡುವುದು ಹಾಗೂ ಲೈಂಗಿಕ ದೌರ್ಜನ್ಯ ನಡೆಸುವುದು ಇಂತಹ ಆರೋಪಗಳು ಕೇಳಿ ಬರುತ್ತಿದೆ.

ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿರುವ ಲಕ್ಷಾಂತರ ಹೆಣ್ಣು ಮಕ್ಕಳು, ಪತ್ತೆ ಆಗದಿರುವ ಪ್ರಕರಣಗಳು, ಇತ್ಯರ್ಥವಾಗದೇ ಇರುವುದಕ್ಕೂ ಈಗ ಬೆಳಕಿಗೆ ಬರುತ್ತಿರುವ ಎಲ್ಲಾ ವ್ಯವಸ್ಥಿತ ಜಿಯಾದಿ ಬೆಳವಣಿಗೆಗೂ ನೇರ ಸಂಬಂಧವಿದೆ ಎಂಬ ಅನುಮಾನಗಳು ಬರುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದ ಜಿಹಾದ್ ಹಾಗೂ ಭಯೋತ್ಪಾದನೆಯ ಎಲ್ಲಾ ಪ್ರಕರಣಗಳನ್ನು NIA, ED, SIT ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆ ಆಗಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿ ಎಚ್ ಪಿ ಹಾಗೂ ಬಜರಂಗದಳದ ಪದಾಧಿಕಾರಿಗಳು ,ಕಾರ್ಯಕರ್ತರು, ಬಿಜೆಪಿ ಪದಾಧಿಕಾರಿಗಳು ಹಾಗೂ ಸನಾತನ ಸೇವಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *