
ಸಕಲೇಶಪುರ : ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತ್ತು ರಾಜ್ಯ ಜಾತ್ಯತೀತ ಜನತಾದಳ ಪಕ್ಷದ ನಿರ್ದೇಶನಂತೆ ಎಸ್.ಐ.ಆರ್.( ವಿಶೇಷ ಸಮಗ್ರ ವರದಿ) ನೀಡಲು ಪಕ್ಷದ ರಾಜ್ಯ ಚುನಾವಣಾ ಸಮಿತಿಯ ಆದೇಶದ ಮೇರೆಗೆ ಇಂದು ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರ ಸಕಲೇಶಪುರ ನಿವಾಸದಲ್ಲಿ ಬಿ. ಎಲ್. ಓ.ಗಳಿಗೆ ಮಾಹಿತಿ ನೀಡಲು ಪಕ್ಷದ ಬೂತ್ ಏಜೆಂಟ್ ನೇಮಿಸಲು ಮತ್ತು ಅವರ ಕರ್ತವ್ಯಬಗ್ಗೆ ಚರ್ಚಿಸಲು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಪ್ರತಿ ಮತಗಟ್ಟೆಯಲ್ಲಿ ಏಜೆಂಟರಗಳನ್ನು ಯಾವ ರೀತಿ ಕೆಲಸ ಮಾಡಬೇಕೆಂದು ಪಕ್ಷದ ಬಿ ಎಲ್ ಓ.1. ರವರಾದ ಕಾಡಪ್ಪ ರವರು ಎಲ್ಲ ಏಜೆಂಟರಗಳಿಗೆ ಮಾಹಿತಿ ನೀಡಿದರು
ಇದರಂತೆ ಶಿಸ್ತುಬದ್ಧವಾಗಿ ಮತದಾನ ವಂಚಿತರನ್ನು ಅವರವರ ಮತಗಟ್ಟೆಯಲ್ಲಿ ಹುಡುಕಿ ಮತಗಟ್ಟೆಯ ಬಿಎಲ್ಓಗಳಿಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು , ಬಿ ಎಲ್ ಓ 1 ರಾಧಾ, ಕಾಡಪ್ಪ ರವರು ಅಧ್ಯಕ್ಷತೆಯನ್ನು ವಹಿಸಿದ್ದರು
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚಂಚಲ ಕುಮಾರಸ್ವಾಮಿ ರವರು, ಕುಮಾರಸ್ವಾಮಿ ರವರು, ಪುರಸಭೆ ಮಾಜಿ ಅಧ್ಯಕ್ಷರಾದ ಜ್ಯೋತಿ ರಾಜಕುಮಾರ್ ರವರು ಹಾಗೂ ಮುಖಂಡರು ಹಾಜರಿದ್ದರು.





