ಅರಸೀಕೆರೆ : ಬಾನಂಗಳದಲ್ಲಿ ಸೂರ್ಯ ತನ್ನ ದಿನಚರಿಯನ್ನು ಮುಗಿಸಿ ಮರೆಯಾಗುತ್ತಿದ್ದಂತೆ ಇತ್ತ ಬೆಳದಿಂಗಳ ಮೂಲಕ ಮಾಡಾಳು ಗ್ರಾಮದಲ್ಲಿ ನಡೆಯುತ್ತಿರುವ ಕೋಡಿಮಠದ ಮಹಾ ತಪಸ್ವಿ ಶಿವಲಿಂಗಜ್ಜಯ್ಯನವರ ಪುಣ್ಯ ಪ್ರವಚನ ಕೇಳಲು ಭಕ್ತರು ಹಾಜರಾಗುತ್ತಿರುವುದು ಸಂತಸ ಮೂಡಿಸುತ್ತಿದೆ.

ಅರಸೀಕೆರೆ ತಾಲ್ಲೂಕ್ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸುವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಈ ಧಾರ್ಮಿಕ ಪುಣ್ಯ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.

ಕೋಡಿಮಠದ ನಿರ್ವಿಕಲ್ಪ ಸಮಾಧಿಯಲ್ಲಿರುವ ಪವಾಡ ಪುರುಷ ಶ್ರೀ ಶಿವಲಿಂಗಜ್ಜಯ್ಯನವರ 139ನೇ ವರ್ಷದ ಸ್ಮರಣಾರ್ಥವಾಗಿ ಕರ್ನಾಟಕದ ಕಲಾ ಶ್ರೀ ಕಲ್ಲಿನಾಥ ಶಾಸ್ತ್ರಿಗಳುಶಿವಲಿಂಗ ಜ್ಜ ನವರ ಪ್ರವಚನ ಸಂದೇಶ ನೀಡುತ್ತಿದ್ದಾರೆ

ಶುಕ್ರವಾರದಿಂದ ಪ್ರತಿದಿನ ಸಂಜೆ ಚಂದಮಾಮನ ಬೆಳಕಿನಲ್ಲಿ ಬೀಸುವಹಿತವಾದ ತಂಗಾಳಿ ಭಕ್ತರ ಮನಸ್ಸಿನಲ್ಲಿ ಉಲ್ಲಾಸ ನೀಡುತ್ತಿದೆ.

ಪ್ರವಚನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೋಡಿಮಠದ ಉತ್ತರಾ ಧಿಕಾರಿ ಶ್ರೀ ಚೇತನ್ ನ ಮರಿದೇವರುನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಲಾಗುತ್ತಿದೆ ಎಂದರು

ಮನುಷ್ಯನ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ ಆತ್ಮ ಸಂಯಮ ಆಧ್ಯಾತ್ಮಿಕ ಅಡಿಪಾಯ ಎಂದು ಸ್ವಾಮೀಜಿ ಹೇಳಿದರು

ಕಾರ್ಯಕ್ರಮದಲ್ಲಿ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಮುಖಂಡ ಎಂ ಡಿ ಸೋಮಶೇಖರ್ ಕೋಡಿಮಠ ಏಜೆಂಟ್ ಎಚ್ ಸಿ ಗಮಹದೇವಪ್ಪಅಪಾರಭಕ್ತ ಸಮೂಹ ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *