
ಸಕಲೇಶಪುರ – ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಗೆಲುವನ್ನು ಹಿಂದುತ್ವದ ಗೆಲುವೆಂದು ಪಟಾಕಿ ಸಿಡಿಸಿ ಪಂಜು ಹಿಡಿದು ಸಿಹಿ ಹಂಚಿ ಸಂಭ್ರಮಿಸಿದ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು.
ಪ.ಬ ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಅದೆಷ್ಟೋ ಇಂಥಹ ಬಡ ಹಿಂದೂ ಕುಟುಂಬಗಳು ಮಾನ ಪ್ರಾಣ ತ್ಯಾಗ ಮಾಡಿ ಬಲಿದಾನವಾಗಿದ್ದಾರೆ. ಅಂಥಹ ತ್ಯಾಗ ಜೀವಿಗಳ ಪರಿಶ್ರಮದಿಂದ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಹಿಂದೂ ಮುಖಂಡ ರಘು ಸಕಲೇಶಪುರ ಹೇಳಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಂಜೆ 06:30 ಕ್ಕೆ ಸಕಲೇಶಪುರ ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾವಣೆಗೊಂಡ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಪಂಜು ಹಿಡಿದು ಪಶ್ಚಿಮ ಬಂಗಾಳದಲ್ಲಿ ಬಲಿದಾನಗೈದ ಹಿಂದೂಗಳನ್ನು ಸ್ಮರಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ಬಹುಮುಖ್ಯವಾಗಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಧನ್ಯವಾದ ಸಲ್ಲಿಸಿದರು.
ದೇಶಭಕ್ತಿಯ ಪಕ್ಷನಿಷ್ಟೆಯ ಕಾರ್ಯಕರ್ತರಾದ ಹಿಂದೂ ಮುಖಂಡ ರಘು ಸಕಲೇಶಪುರ ಸೇರಿದಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಮಂಜುನಾಥ್ ಕಬ್ಬಿನಗದ್ದೆ. ಕೌಶಿಕ್ ಹೆಚ್.ಎಂ. ಶಿವು ಜಿಪ್ಪಿ. ಶ್ರೀಜಿತ್ ಗೌಡ. ವಿಜಿತ್ ಗೌಡ. ರವಿ ಹೆಬ್ಬಸಾಲೆ. ಶೇಖರ್ ಕಬ್ಬಿನ ಗದ್ದೆ. ಹರ್ಷ. ಪ್ರಸನ್ನ. ಸಂತೋಷ್. ಸೇರಿದಂತೆ ಇತರರಿದ್ದರು.
